ಸುರಪುರ : ನಗನೂರ ಬಳಿ ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು - ಸುರಪುರ ಬಳಿ ಕಾರಿನಲ್ಲಿ ಬೆಂಕಿ
🎬 Watch Now: Feature Video
ಸುರಪುರ (ಯಾದಗಿರಿ) : ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರೊಂದು ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಘಟನೆ ತಾಲೂಕಿನ ನಗನೂರ ಬಳಿ ನಡೆದಿದೆ. ಕೆಂಭಾವಿಯ ಸಿದ್ದರಾಮ ಅರವಾಳ ಎಂಬುವರ ಇಂಡಿಕಾ ಕಾರು ಬೆಂಕಿಗಾಹುತಿಯಾಗಿದೆ. ಸಿದ್ದರಾಮ ಅವರು ಸ್ನೇಹಿತ ಮದುವೆ ಸಮಾರಂಭ ಮುಗಿಸಿ ಶಹಾಪುರದಿಂದ ಕೆಂಭಾವಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ರಸ್ತೆ ಮಧ್ಯೆ ಇಂಜಿನ್ನಲ್ಲಿ ಹೊಗೆ ಕಾಣಿಸಿದ್ದರಿಂದ ಸಿದ್ದರಾಮ ಕಾರಿನಿಂದ ಕೆಳಗಿಳಿದಿದ್ದರು, ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.