ಸಿನಿಮಾ ಶೈಲಿಯಲ್ಲಿ ಕಾರಿಗೆ ಗುದ್ದಿದ ಎತ್ತಿನ ಗಾಡಿ... ವಿಡಿಯೋ - ಅಜ್ಜಂಪುರದ ಪೆಟ್ರೋಲ್ ಬಂಕ್ ಬಳಿ ರಸ್ತೆ
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವ ಮುಗಿಸಿಕೊಂಡು ಹೋಗುತ್ತಿದ್ದ ಎತ್ತಿನ ಗಾಡಿ ಸಿನಿಮಾ ಶೈಲಿಯಲ್ಲಿ ಅಪಘಾತಕ್ಕೆ ಒಳಗಾಗಿದೆ. ಹೌದು, ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧ ಭಾಗದಿಂದ ಭಕ್ತಾಧಿಗಳು ಎತ್ತಿನ ಗಾಡಿಯಲ್ಲಿ ಬರೋದು ವಿಶೇಷ. ಅದೇ ರೀತಿ ಒಂದು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಎತ್ತಿನ ಗಾಡಿಯಲ್ಲಿ ಆಗಮಿಸಿದ್ರು. ಜಾತ್ರೆಯನ್ನು ಮುಗಿಸಿಕೊಂಡು ಹೋಗುವ ವೇಳೆ ನಾ ಮುಂದು ತಾ ಮುಂದು ಎಂದೂ ಜಿದ್ದಿಗೆ ಬಿದ್ದವರಂತೆ ರಸ್ತೆಯಲ್ಲಿ ಎತ್ತಿನ ಗಾಡಿಯಲ್ಲಿ ವೇಗಾವಾಗಿ ಹೋಗುವ ವೇಳೆ ಅಜ್ಜಂಪುರದ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಎತ್ತಿನ ಗಾಡಿ ಗುದ್ದಿದ್ದು ಎತ್ತುಗಳು ಗಾಳಿಯಲ್ಲಿ ಹಾರಿ ಬಿದ್ದಿವೆ. ಈ ಘಟನೆಯಿಂದ ಕಾರು ಜಖಂ ಆಗಿದ್ದು, ಎತ್ತಿನ ಗಾಡಿಯಲ್ಲಿದ್ದ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.