ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್ಗೆ 'ಸಿಂಹ ಸ್ವಪ್ನ'ವಾಗಿದ್ದರು ಸುಷ್ಮಾ ಸ್ವರಾಜ್ - Sushma Swaraj
🎬 Watch Now: Feature Video
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನವು ಹಿಂದೆಂದಿಗಿಂತಲೂ ತೀವ್ರ ಕುತೂಹಲ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ. ದಶಕಗಳ ಬಹು ಚರ್ಚಿತ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 370 ಅನ್ನು ಭಾರತ ವಾಪಸ್ ಪಡೆದಿದೆ. ಇದೇ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಾಯಕರ ಭಾಷಣ ಕುತೂಹಲ ಕೆರಳಿಸಿತ್ತು. ನಿರೀಕ್ಷೆಯಂತೆ ಪರಸ್ಪರ ದಾಳಿ- ವಾಗ್ದಾಳಿ ಎರಡೂ ನಡೆದಿವೆ. ಇಮ್ರಾನ್ ಖಾನ್ ಎಂದಿನಂತೆ ಪ್ರಧಾನಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.