ಭತ್ತದ ಪೈರಿನಡಿ ಅವಿತು ಕುಳಿತಿತ್ತು ಮೊಸಳೆ... ಕೊಯ್ಲು ಮಾಡುವಾಗ ಬೆಚ್ಚಿದ ರೈತರು, ಮುಂದೇನಾಯ್ತು? - 5 feet long crocodile found in koppal
🎬 Watch Now: Feature Video
ಕೊಪ್ಪಳ: ಗಂಗಾವತಿ ತಾಲೂಕಿನ ಮುಸ್ಟೂರು ಗ್ರಾಮದ ಹೊರ ವಲಯದ ರೈತರೊಬ್ಬರ ಹೊಲದಲ್ಲಿ ಭತ್ತ ಕೊಯ್ಲು ಮಾಡುವಾಗ ಭತ್ತದ ಗದ್ದೆಯಲ್ಲಿ ಬೃಹತ್ ಮೊಸಳೆಯೊಂದು ಪತ್ತೆಯಾಗಿದೆ. ಗ್ರಾಮದ ಉಮೇಶ ಭೈರಿ ಎಂಬುವವರು ಹೊಲದಲ್ಲಿ ಯಂತ್ರದ ಮೂಲಕ ಭತ್ತ ಕೊಯ್ಲು ಮಾಡುವಾಗ ಸುಮಾರು ಐದು ಅಡಿ ಉದ್ದದ ಮೊಸಳೆ ಪತ್ತೆಯಾಗಿದೆ. ಕೂಡಲೇ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದವರು ಓಡಿ ಹೊರಕ್ಕೆ ಬಂದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಮಿಸಿದ ಕೆಲ ಯುವಕರು,ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವ ಮೊದಲೇ ಮೊಸಳೆ ಹಿಡಿದು ಸುರಕ್ಷಿತವಾಗಿ ಸಮೀಪದ ತುಂಗಭದ್ರಾ ನದಿಗೆ ಬಿಟ್ಟಿದ್ದಾರೆ.