thumbnail

ಮಂಡ್ಯದಲ್ಲಿ ನಾಳೆಯಿಂದ ವಾರದ 5 ದಿನ ಕಂಪ್ಲೀಟ್ ಲಾಕ್​ಡೌನ್

By

Published : Jun 6, 2021, 1:50 PM IST

ನಾಳೆಯಿಂದ ವಾರದಲ್ಲಿ 5 ದಿನ ಕಂಪ್ಲೀಟ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ರಸ್ತೆಗಿಳಿದಿದ್ದಾರೆ‌. ಕೆಲವರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿ ಕೋವಿಡ್ ನಿಯಮ‌ ಪಾಲಿಸಿದರು. ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಿದ್ದರಿಂದ ಮೀನು, ಮಾಂಸ, ಖರೀದಿಗೆ ಜನರು ಮುಗಿಬಿದ್ದಿದ್ದು ಗೋಚರಿಸಿತು. ಕಳೆದ ಎರಡು ವಾರದಿಂದ ನಾಲ್ಕು ದಿನ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್‌ಡೌನ್ ಇತ್ತು. ಹೀಗಾಗಿ ಇಂದು ಅಗತ್ಯ ವಸ್ತುಗಳ‌ ಖರೀದಿಗೆ ರಸ್ತೆಗೆ‌ ಇಳಿದಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.