ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವ - 349th annual worship
🎬 Watch Now: Feature Video
ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವ ಕಳೆಗಟ್ಟಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬೃಂದಾವನಕ್ಕೆ ವಿಶಿಷ್ಟ ಅಲಂಕಾರ ಮಾಡಲಾಗಿದ್ದು, ಪೂಜಾ ಕೈಂಕರ್ಯಗಳನ್ನ ಕೈಗೊಳ್ಳಲಾಗಿದೆ. ಪ್ರಸ್ತುತ ವರ್ಷ ಕೊರೊನಾ ಸಮಸ್ಯೆ ಇರುವ ಕಾರಣ ಸರ್ಕಾರದ ನಿಮಯಗಳ ಅನುಸಾರ ಮಹೋತ್ಸವ ಆಚರಿಸಲಾಗುತ್ತಿದೆ. ಹಾಗೆಯೇ ಸರ್ಕಾರದ ನಿಯಮದಂತೆ ಪ್ರಸ್ತುತ ವರ್ಷ ರಥೋತ್ಸವವನ್ನು ರದ್ದುಪಡಿಸಲಾಗಿದೆ. ದೇವಸ್ಥಾನದ ಒಳಗೆ ಪಲ್ಲಕ್ಕಿ ಸೇವೆ ಮಾತ್ರ ಆಚರಿಸಲಾಗುತ್ತಿದೆ ಎಂದು ಮಠ ಮೂಲಗಳು ತಿಳಿಸಿವೆ.