ಗುಡ್ಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 30 ಮಂದಿ ...ಸ್ಥಳಾಂತರಕ್ಕೆ ಆ ಸಂತ್ರಸ್ತರು ಷರತ್ತು ಹಾಕಿದ್ದೇಕೆ?
🎬 Watch Now: Feature Video
ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಾಲೂಕಿನ ಎಸ್.ಪಿ. ನಾಗರಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿರುವವರನ್ನು ಹುಡುಕುತ್ತಾ ಸಾಗಿದ ಅಗ್ನಿ ಶಾಮಕ ದಳದವರಿಗೆ ಗುಡ್ಡದ ಪ್ರದೇಶವೊಂದರಲ್ಲಿ 30 ಜನರು ಇರುವುದು ಕಂಡು ಬಂದಿತಾದರೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಆಗಲಿಲ್ಲ. ಜಾನುವಾರುಗಳು ಇರುವುದರಿಂದ ಆ ಪ್ರದೇಶದಿಂದ ಬಿಟ್ಟು ಬರಲು ಅವರು ಒಪ್ಪಲಿಲ್ಲ. ನಮ್ಮ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳಿದ್ದು, ಅವುಗಳನ್ನು ಸ್ಥಳಾಂತರ ಮಾಡುವಾಗ ಪ್ರಾಣಾಪಾಯ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ನಾವು ಇಲ್ಲೆ ಇರುತ್ತೇವೆ ಎಂದು ಜಿಲ್ಲಾ ಪಂಚಾಯತ್ನ ಸಿಇಒ ಗಂಗೂಬಾಯಿ ಮಾನಕರ ಅವರಿಗೆ ಮನವಿ ಮಾಡಿಕೊಂಡರು. ಪರಿಸ್ಥಿತಿ ಗಮನಿಸಿದ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಿ, ಮೂರು ದಿನಗಳ ಕಾಲ ಆಗುವಷ್ಟು ಅಡುಗೆ ಪದಾರ್ಥಗಳನ್ನು ನೀಡಿ ಸುರಕ್ಷಿತ ವಾಗಿರುವಂತೆ ತಿಳಿಸಿ ವಾಪಸ್ ಬಂದಿದ್ದಾರೆ.
Last Updated : Aug 9, 2019, 10:46 PM IST