ಹಾಸನ: ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ 2,912 ವಾಹನಗಳು ಸೀಜ್ - 2,512 ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸ್ ನ್ಯೂಸ್
🎬 Watch Now: Feature Video
ಹಾಸನ: ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿದ್ದರೂ ಕೂಡ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 2,912 ವಾಹನಗಳನ್ನು ಜಿಲ್ಲೆಯಲ್ಲಿ ಪೊಲೀಸರು ಜಪ್ತಿ ಮಾಡಿ 16,13,500 ರೂ. ದಂಡ ವಸೂಲಿ ಮಾಡಿದ್ದಾರೆ. 2,512 ಬೈಕ್‌ಗಳನ್ನು ವಶಕ್ಕೆ ಪಡೆದು 14,13,500 ರೂ. ದಂಡ ಹಾಕಿದ್ದಾರೆ. 315 ಲಘು ವಾಹನಗಳನ್ನು ವಶಕ್ಕೆ ಪಡೆದು 1,57,500 ರೂ. ಮತ್ತು 85 ಇತರೆ ವಾಹನಗಳಿಂದ 42,500 ರೂ.ದಂಡ ವಸೂಲಿ ಮಾಡಿದ್ದಾರೆ.