ಹಸಿದ ಹೊಟ್ಟೆ ತುಂಬಿಸಿದ 2020ರ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ - ಹಸಿದ ಹೊಟ್ಟೆ ತುಂಬಿಸಿದ 2020ರ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ'
🎬 Watch Now: Feature Video
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈ ಎಸ್ ಇಂಟರ್‌ನ್ಯಾಷನಲ್ ವೀಕ್ ಎಂಬ ಸಂಸ್ಥೆ ವತಿಯಿಂದ 2020ರ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಆಯೋಜಿಲಾಗಿತ್ತು. ಲಾಕ್ಡೌನ್ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಫ್ಯಾಶನ್ ಶೋ ಇದಾಗಿದ್ದು, ಈ ಸ್ಪರ್ಧೆಯಲ್ಲಿ ಹಲವಾರು ಯುವಕ-ಯುವತಿಯರು, ಪುಟಾಣಿಗಳು ಹಾಗೂ ವಿವಾಹಿತರು ಸ್ಪರ್ಧಿಸಿದ್ದರು. ವಿಶೇಷ ಅಂದ್ರೆ ಈ ಸ್ಪರ್ಧೆಯಿಂದ ಬರುವ ಹಣವನ್ನು ಶಾಲಾ ಮಕ್ಕಳಿಗೆ ಅವಶ್ಯಕ ವಸ್ತುಗಳ ಖರೀದಿ, ವೃದ್ಧಾಶ್ರಮಕ್ಕೆ ನೀಡಲು ಹಾಗೂ ಹಸಿದ ಹೊಟ್ಟೆ ತುಂಬಿಸಲು ಬಳಸುವ ಮೂಲಕ ಈ ಸಂಸ್ಥೆ ಸಮಾಜ ಸೇವೆ ಮಾಡುತ್ತಿದೆ.