ಎಟಿಎಂಗಳಲ್ಲಿ ಕಣ್ಮರೆಯಾದ 2 ಸಾವಿರ ನೋಟು: ಈ ಕುರಿತು ಸ್ಥಳೀಯರ ಮಾತೇನು? - ಎಟಿಎಂಗಳಲ್ಲಿ ಕಣ್ಮರೆಯಾದ 2 ಸಾವಿರ ನೋಟು
🎬 Watch Now: Feature Video
ಬೆಂಗಳೂರು: ನೋಟ್ಬ್ಯಾನ್ ವೇಳೆ ಚಲಾವಣೆಗೆ ಬಂದಿದ್ದ 2 ಸಾವಿರ ಮುಖಬೆಲೆಯ ನೋಟು ಬ್ಯಾನ್ ಆಗಲಿದೆ ಎಂಬ ವರದಿ ಬೆನ್ನಲ್ಲೆ ನಗರದ ಎಟಿಎಂ ಕೇಂದ್ರಗಳಲ್ಲಿ 2 ಸಾವಿರ ನೋಟು ಚಲಾವಣೆ ಕ್ಷೀಣಿಸಿದೆ. ಈಗಾಗಲೇ ಇಂಡಿಯನ್ ಬ್ಯಾಂಕ್ ತನ್ನ ಎಲ್ಲ ಶಾಖಾ ಕಚೇರಿಗಳ ಎಟಿಎಂಗಳಲ್ಲಿ 2 ಸಾವಿರ ನೋಟು ಹಾಕದಿರಲು ನಿರ್ಧರಿಸಿದೆ. ಎಟಿಎಂನಲ್ಲಿ 100, 200, 500 ಹಾಗೂ 2000 ಬೆಲೆಯ ನೋಟುಗಳನ್ನು ಭರ್ತಿ ಮಾಡಲು ಅವಕಾಶವಿದ್ದು, ಸದ್ಯ 2 ಸಾವಿರ ನೋಟು ಭರ್ತಿಯಾಗುವ ಬಾಕ್ಸ್ ತೆಗೆದು ಹಾಕಿ ಅಲ್ಲಿ 500 ರೂ. ನೋಟು ಭರ್ತಿ ಮಾಡುವಂತೆ ಬಾಕ್ಸ್ ಮರು ವಿನ್ಯಾಸ ಮಾಡಲಾಗುತ್ತಿದೆ. ಪ್ರಸ್ತುತ 2.40 ಲಕ್ಷ ಎಟಿಎಂಗಳಿದ್ದು, ಹಂತ-ಹಂತವಾಗಿ ಹೊಸ ಮಾದರಿ ಬಾಕ್ಸ್ ಮಾಡಲಾಗುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇನ್ನು ಈ ಕುರಿತು ಸಾರ್ವಜನಿಕರು ನೀಡಿರುವ ಪ್ರತಿಕ್ರಿಯೆ ಇದು.