ಶಿವಮೊಗ್ಗ ಜಿಲ್ಲೆಯಲ್ಲಿ 176ಕ್ಕೇರಿದ ಕೊರೊನಾ ಪ್ರಕರಣಗಳ ಸಂಖ್ಯೆ: ಪ್ರತ್ಯಕ್ಷ ವರದಿ - ಶಿವಮೊಗ್ಗ ಜಿಲ್ಲೆ ಕೊರೊನಾ ವರದಿ
🎬 Watch Now: Feature Video
ಶಿವಮೊಗ್ಗ: ಜಿಲ್ಲೆಯಲ್ಲಿ ನಿನ್ನೆ 3 ಕೊರೊನಾ ಪಾಸಿಟಿವ್ ಪ್ರಕರಣ ಸೇರಿದಂತೆ ಒಟ್ಟು 176 ಜನರು ಸೋಂಕಿಗೆ ಒಳಗಾಗಿದ್ದಾರೆ. ಸದ್ಯ 65 ಸೋಂಕಿತರು ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2 ಸಾವು ಸಂಭವಿಸಿದ್ದು, ನಿನ್ನೆ ಯಾರೂ ಸಹ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ 22 ಕಂಟೇನ್ಮೆಂಟ್ ಝೋನ್ ಮಾಡಲಾಗಿದ್ದು, ನಿನ್ನೆ 281 ಜನರ ಸ್ವ್ಯಾಬ್ ತೆಗೆಯಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 15,348 ಜನರ ಸ್ವ್ಯಾಬ್ ಮಾದರಿ ತೆಗೆಯಲಾಗಿದೆ. ಇದರಲ್ಲಿ 14,458 ಜನರ ಸ್ವ್ಯಾಬ್ ವರದಿ ಬಂದಿದ್ದು, ಇನ್ನೂ 712 ಜನರ ಪರೀಕ್ಷೆ ವರದಿ ಬರಬೇಕಿದೆ. ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತಾದ ವಾಕ್ ಥ್ರೂ ಇಲ್ಲಿದೆ...