ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 15 ಎಕರೆ ಕಬ್ಬು ಬೆಂಕಿಗಾಹುತಿ - 15 acres of sugar cane destroyed from short circuit in chikkodi
🎬 Watch Now: Feature Video

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 15 ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜೈಕರ ಚೌಗಲಾ, ಶ್ರೀಪಾಲ ಚೌಗಲಾ, ಮಹಾದೇವ ತೆಲಸಂಗೆ ಎಂಬುವವರಿಗೆ ಸೇರಿದ 15 ಎಕರೆ ಕಬ್ಬಿನ ಬೆಳೆಗೆ ವಿದ್ಯುತ್ ತಂತಿಯ ಘರ್ಷಣೆಯಿಂದ ಬೆಂಕಿ ತಗುಲಿದ್ದು, ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.