'ಪಂಚಕರ್ಮ' ಚಿಕಿತ್ಸೆ ಮೊರೆ ಹೋದ ಸಿಎಂ..! - kannada news
🎬 Watch Now: Feature Video
ಉಡುಪಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನು ಬಾಕಿ ಉಳಿದಿರುವುದು ಫಲಿತಾಂಶ ಮಾತ್ರ. ಇದಕ್ಕಾಗಿ ಜನ, ಜನಪ್ರತಿನಿಧಿಗಳು ಮೇ 23ರತ್ತ ದೃಷ್ಟಿ ನೆಟ್ಟಿದ್ದಾರೆ. ಈ ನಡುವೆ, ರಾಜಕಾರಣಿಗಳು ಮತ ಪ್ರಚಾರದಲ್ಲಾದ ಆಯಾಸ ನೀಗಿಸಿಕೊಳ್ಳಲು ವಿವಿಧ ರೀತಿಯ ವಿಶೇಷ ಚಿಕಿತ್ಸೆಗಳ ಮೊರೆ ಹೋಗುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗು ಮಾಜಿ ಪ್ರಧಾನಿ ದೇವೇಗೌಡರು ಕಡಲತಡಿಗೆ ಪ್ರಯಾಣ ಬೆಳೆಸಿದ್ದು, ರಿಲ್ಯಾಕ್ಸ್ ಮೋಡ್‌ನಲ್ಲಿರುವುದು ಕಂಡು ಬಂತು.