ವರ್ಷದ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಲು ರೋಹಿತ್ ಶರ್ಮಾ ತಯಾರಿ: ವಿಡಿಯೋ - ಭಾರತ ಮತ್ತು ಆಸ್ಟ್ರೇಲಿಯಾ 3ನೇ ಟೆಸ್ಟ್
🎬 Watch Now: Feature Video
ಸಿಡ್ನಿ: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಸುಮಾರು 14 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳಲು ಸಿದ್ದರಾಗುತ್ತಿದ್ದಾರೆ. ಅವರು ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕವಾಗಿ ಖಚಿತವಾಗಿದೆ. ಸರಣಿ ಗೆಲುವಿಗೆ ನಿರ್ಣಾಯಕವಾಗಿರುವ 3ನೇ ಟೆಸ್ಟ್ಗೂ ಮುನ್ನ ಸಿಡ್ನಿ ಮೈದಾನದ ನೆಟ್ಸ್ನಲ್ಲಿ ಇತರೆ ಆಟಗಾರರೊಂದಿಗೆ ಅಭ್ಯಾಸ ನಡೆಸಿದ್ದಾರೆ. ರೋಹಿತ್ ಶರ್ಮಾ ಕೊನೆಯದಾಗಿ 2019 ಡಿಸೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.