ವಿರಾಟ್ ನಾಯಕ, ನಾನು ಉಪನಾಯಕ: ಕೊಹ್ಲಿ ತಂಡಕ್ಕೆ ಮರಳಿರುವುದು ಸಂತೋಷ: ರಹಾನೆ! - ಚೆನ್ನೈನಲ್ಲಿ ಟೆಸ್ಟ್ ಪಂದ್ಯ
🎬 Watch Now: Feature Video
ಚೆನ್ನೈ: ಫೆ.5ರಿಂದ ಇಂಗ್ಲೆಂಡ್-ಭಾರತ ತಂಡಗಳ ನಡುವೆ ಟೆಸ್ಟ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಸಜ್ಜುಗೊಳ್ಳುತ್ತಿವೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಆಂಗ್ಲರ ಮೇಲೆ ಸವಾರಿ ಮಾಡಲು ಸಜ್ಜಾಗಿದೆ. ಇದೇ ವಿಚಾರವಾಗಿ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಮಾತನಾಡಿದ್ದು, ವಿರಾಟ್ ನಾಯಕ, ತಾವು ಉಪನಾಯಕ ಎಂದು ಹೇಳಿದ್ದಾರೆ. ಅವರು ತಂಡಕ್ಕೆ ಮರಳಿ ಬಂದಿರುವುದು ಸಂತೋಷವಾಗಿದೆ. ಒಟ್ಟಿಗೆ ಆಡುವುದರ ಬಗ್ಗೆ ಗಮನ ಹರಿಸಿದ್ದೇವೆ. ಸ್ವಲ್ಪ ಹೊಂದಾಣಿಕೆ ಅಗತ್ಯವಿದೆ ಎಂದಿರುವ ರಹಾನೆ, ಸದ್ಯ ಉತ್ತಮವಾಗಿ ಚೆನ್ನಾಗಿ ಬ್ಯಾಟಿಂಗ್ ಮಾಡ್ತಿದ್ದೇನೆ ಎಂದು ತಿಳಿಸಿದ್ದಾರೆ.