ಮತಯಂತ್ರಗಳಲ್ಲಿ ರಾಜಕಾರಣಿಗಳ ಭವಿಷ್ಯ ಭದ್ರ: ದುರ್ಬೀನು ಹಿಡಿದು ಕಾವಲಿಗೆ ನಿಂತ ಎಸ್ಪಿ ಅಭ್ಯರ್ಥಿ - ಉತ್ತರ ಪ್ರದೇಶ ಚುನಾವಣೆ 2022
🎬 Watch Now: Feature Video
ಉತ್ತರ ಪ್ರದೇಶ, ಗೋವಾ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ನಡೆದ ಮತದಾನ ಈಗಾಗಲೇ ಮುಕ್ತಾಯಗೊಂಡಿದೆ. ಮಾರ್ಚ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು ಅವುಗಳನ್ನು ಬಿಗಿ ಭದ್ರತೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಇನ್ನೊಂದೆಡೆ, ಸಹಜವಾಗಿಯೇ ಅಭ್ಯರ್ಥಿಗಳ ಎದೆಬಡಿತವೂ ಹೆಚ್ಚಾಗಿದೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಸ್ತಿನಾಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಯೋಗೇಶ್ ವರ್ಮಾ ಕೂಡ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದು ಇದೀಗ ಇವಿಎಂ ಸ್ಟ್ರಾಂಗ್ ರೂಂ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇವರು ಕೈಯಲ್ಲಿ ದುರ್ಬೀನು ಹಿಡಿದು, ಸ್ಟ್ರಾಂಗ್ ರೂಂನಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ನಿಗಾ ವಹಿಸಿದ್ದಾರೆ. 403 ವಿಧಾನಸಭೆ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಮತದಾನವಾಗಿದ್ದು, ಬಿಜೆಪಿ-ಸಮಾಜವಾದಿ ಪಕ್ಷದ ನಡುವೆ ಪೈಪೋಟಿ ಇದೆ.
Last Updated : Feb 3, 2023, 8:18 PM IST