ಇನ್ಮುಂದೆ ಅಪ್ಪ-ಅಮ್ಮನ ಜೊತೆ ಅಪ್ಪು ಸಮಾಧಿಗೂ ನಮನ ಸಲ್ಲಿಸುವೆವು: ರಾಘವೇಂದ್ರ ರಾಜ್‌ಕುಮಾರ್ - ಅಂತ್ಯ ಸಂಸ್ಕಾರ ಬಳಿಕ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ
🎬 Watch Now: Feature Video
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ ಎಲ್ಲರಿಗೂ ರಾಘವೇಂದ್ರ ರಾಜಕುಮಾರ್ ಅವರು ಧನ್ಯವಾದ ಸಲ್ಲಿಸಿದರು. ಇಷ್ಟು ದಿನ ಅಪ್ಪಾಜಿ, ಅಮ್ಮನ ಸಮಾಧಿಗೆ ನಮ್ಮ ಜೊತೆಗೆ ಪುನೀತ್ ಕೂಡ ಬಂದು ನಮಸ್ಕಾರ ಮಾಡುತ್ತಿದ್ದರು. ಆದರೆ ಇನ್ಮುಂದೆ ಅಪ್ಪಾಜಿ, ಅಮ್ಮನ ಜೊತೆಗೆ ಅಪ್ಪು ಸಮಾಧಿಗೂ ನಾವು ನಮನ ಸಲ್ಲಿಸಬೇಕಿದೆ. ಅಪ್ಪು ನನಗಿಂತ 10 ವರ್ಷ ಚಿಕ್ಕವನು, ನಾನು ಯಾವಾಗಲೂ ಅವನನ್ನು ಶೂಟಿಂಗ್ಗೆ ಕರೆದುಕೊಂಡು ಹೋಗುತ್ತಿದ್ದೆ, ಅವನನ್ನು ಮಗ ಅಂತಲೇ ಕರೆಯುತ್ತಿದ್ದೆ. ಇದೀಗ ನನಗೆ ಪುತ್ರ ಶೋಕ ನಿರಂತರವಾಗಿ ಇರಲಿದೆ, ಅದರೊಂದಿಗೆ ನಾನು ಬೆಳೆಯಬೇಕಿದೆ ಎಂದು ದುಃಖ ವ್ಯಕ್ತಪಡಿಸಿದರು. ಮಂಗಳವಾರ ಸಮಾಧಿಗೆ ಹಾಲು-ತುಪ್ಪ ಕಾರ್ಯ ನಡೆಯಲಿದ್ದು, ಅದರ ಬಳಿಕವೇ ಸಮಾಧಿ ನೋಡಲು ಜನರಿಗೆ ಅವಕಾಶ ನೀಡಲಾಗುವುದು ಎಂದರು.