ಅಭಿಮಾನಿ ಮನೆಗೆ ಭೇಟಿ ನೀಡಿದ ಪವರ್ ಸ್ಟಾರ್...ಪುನೀತ್ ಸರಳತೆ ಕೊಂಡಾಡಿದ ಜನರು - ಪುನೀತ್ ರಾಜ್ಕುಮಾರ್
🎬 Watch Now: Feature Video
ಸೆಲಬ್ರಿಟಿಗಳು ಅಭಿಮಾನಿಗಳ ಮನೆಗೆ ಭೇಟಿ ನೀಡುವುದು ನಿಜಕ್ಕೂ ಅಪರೂಪ ಹಾಗೂ ವಿಶೇಷ ಸಂಗತಿ ಎಂದೇ ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಬ್ಬಳ್ಳಿಯ ತಮ್ಮ ಡೈ ಹಾರ್ಡ್ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸರ್ಪ್ರೈಸ್ ನೀಡಿದ್ದಾರೆ. ರಘು, ಪುನೀತ್ ಅವರ ಪಕ್ಕಾ ಅಭಿಮಾನಿಯಾಗಿದ್ದು ಪುನೀತ್ರನ್ನು ಮನೆಗೆ ಬರುವಂತೆ ಆಗಾಗ್ಗೆ ಮನವಿ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ರಘು ಮನೆಗೆ ಭೇಟಿ ನೀಡಿದ ಪುನೀತ್ ಅಭಿಮಾನಿ ಮನೆಯಲ್ಲಿ ಊಟ ಮಾಡಿ, ಟೀ ಕುಡಿದು ಮನೆಯವರೊಂದಿಗೆ ಸ್ವಲ್ಪ ಸಮಯ ಕಾಲ ಕಳೆದು ಬಂದಿದ್ದಾರೆ. ಪುನೀತ್ ಅವರ ಈ ಸರಳತೆಯನ್ನು ಎಲ್ಲರೂ ಕೊಂಡಾಡಿದ್ದಾರೆ.
Last Updated : Aug 27, 2019, 11:54 PM IST