'ಮಾತೃ ಭಾಷೆ'ಯಲ್ಲಿ ಮಾತನಾಡಿದ ಯಂಗ್ ಟೈಗರ್ ಜೂ. ಎನ್‌ಟಿಆರ್ - ಆರ್ಆರ್ಆರ್ ಕನ್ನಡ ಟ್ರೈಲರ್
🎬 Watch Now: Feature Video
ಇಂಡಿಯನ್ ಸಿನಿಮಾ ಇಂಡ್ರಸ್ಟ್ರಿಯಲ್ಲಿ ಮೇಕಿಂಗ್ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಸ್ಟಾರ್ ಡೈರೆಕ್ಟರ್ ರಾಜಮೌಳಿಯ ಆರ್ಆರ್ಆರ್ ಸಿನಿಮಾ ಜ.7 ರಂದು ತೆರೆಮೇಲೆ ಬರಲು ಸಿದ್ದವಾಗಿದೆ. ಬೆಂಗಳೂರಿನಲ್ಲಿ ಇಂದು ಚಿತ್ರತಂಡ ಸಿನಿಮಾ ಪ್ರಮೋಷನ್ ಮಾಡಿತು. ಈ ಸಂದರ್ಭದಲ್ಲಿ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಕನ್ನಡದಲ್ಲೇ ಮಾತನಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ, ಅಪ್ಪುವಿನ ಗೆಳೆಯ ಗೆಳೆಯ.. ಹಾಡನ್ನು ಹಾಡಿ ಅಗಲಿದ ಸ್ನೇಹಿತನನ್ನು ನೆನದರು. ಆರ್ಆರ್ಆರ್ ಪ್ರಮೋಷನ್ ಕಾರ್ಯಕ್ರಮದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಬ್ಯೂಟಿ ಆಲಿಯಾ ಭಟ್, ನಿರ್ದೇಶಕ ರಾಜಮೌಳಿ ಉಪಸ್ಥಿತರಿದ್ದರು.