ಸಮಾಜವನ್ನು ತಿದ್ದುವಂತಹ ಹಾಸ್ಯದ ಅಗತ್ಯವಿದೆ: ಹಿರಿಯ ನಟ ಮುಖ್ಯಮಂತ್ರಿ ಚಂದ್ರು - ಹಿರಿಯ ನಟ ಮುಖ್ಯಮಂತ್ರಿ ಚಂದ್ರು
🎬 Watch Now: Feature Video
ಮಂಗಳೂರು: ಹಾಸ್ಯದಲ್ಲಿ ತಮ್ಮದೇ ಶೈಲಿ ಇರಿಸಿಕೊಂಡು ನಟಿಸುತ್ತಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ತಮ್ಮ 28ನೇ ವಯಸ್ಸಿಗೆ 'ಮುಖ್ಯಮಂತ್ರಿ' ನಾಟಕದಲ್ಲಿ ಪಾತ್ರವಹಿಸಿ ದಾಖಲೆ ಬರೆದವರು. 1980ರ ಕಾಲದಿಂದ ಪ್ರದರ್ಶನಗೊಳ್ಳುತ್ತಿರುವ ಈ ನಾಟಕ ಈಗಲೂ ಜನರಿಂದ ಬೇಡಿಕೆ ಇರಿಸಿಕೊಂಡಿದೆ. ಅದಕ್ಕೆ ಮುಖ್ಯಮಂತ್ರಿ ಚಂದ್ರು ಅವರು ನಿರ್ವಹಿಸಿರುವ ಮುಖ್ಯಮಂತ್ರಿ ಪಾತ್ರವೇ ಕಾರಣ. ಈ ನಾಟಕದ ಕಾರಣದಿಂದಲೇ ತಮ್ಮ ಹೆಸರಿನೊಂದಿಗೆ 'ಮುಖ್ಯಮಂತ್ರಿ' ನಾಮವನ್ನು ಶಾಶ್ವತವಾಗಿ ಇರಿಸಿಕೊಂಡಿರುವ ನಟ ಚಂದ್ರು ಅವರು ತಮ್ಮ ಮುಖ್ಯಮಂತ್ರಿ ನಾಟಕ, ಚಿತ್ರರಂಗದ ಇತ್ತೀಚಿನ ಹಾಸ್ಯ, ನಟನೆಯ ಬಗೆಗಿನ ಅನುಭವವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.