ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಕೃಷ್ಣಲೀಲಾ ಬೆಡಗಿ - Actress Mayuri Kyathari
🎬 Watch Now: Feature Video
ಕೋವಿಡ್ ಆತಂಕದ ನಡುವೆಯೂ ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸ್ಯಾಂಡಲ್ವುಡ್ ನಟಿ ಮಯೂರಿ ಕ್ಯಾತರಿ ಮನೆಯಲ್ಲಿ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೆಲವು ತಿಂಗಳ ಹಿಂದೆಯಷ್ಟೇ ಅರುಣ್ ರಾಜ್ ಜೊತೆ ಸಪ್ತಪದಿ ತುಳಿದಿದ್ದ ಮಯೂರಿಗೆ ಇದು ಗಂಡನ ಮನೆಯಲ್ಲಿ ಆಚರಿಸುತ್ತಿರುವ ಮೊದಲ ಗೌರಿ ಹಬ್ಬ. ಹೀಗಾಗಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಗೌರಿಯನ್ನು ಕೂರಿಸಿ, ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ್ದಾರೆ.