ಮತ ಚಲಾಯಿಸಿದ ನಟ ರವಿಶಂಕರ್, ನಟಿ ರಾಗಿಣಿ - ನಟಿ
🎬 Watch Now: Feature Video
ಬೆಂಗಳೂರು: ಯಲಹಂಕದ ಜ್ಮಾನ ದೀಪಿಕಾ ಭಾರ್ಗವಿ ವಿದ್ಯಾ ಸಂಸ್ಥೆಯಲ್ಲಿನ ಮತಗಟ್ಟೆಯಲ್ಲಿ ಸಿನಿಮಾ ನಟ ರವಿಶಂಕರ್ ಮತದಾನ ಮಾಡಿದ್ರು. ಕುಟುಂಬ ಸಮೇತ ಆಗಮಿಸಿದ ಕನ್ನಡದ ಖ್ಯಾತ ಖಳನಟ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು ಎಲ್ಲರೂ ಮತ ಚಲಾಯಿಸಬೇಕು. ಇತ್ತೀಚಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿದೆ. ನಾನು ಕಾಲೇಜ್ ಓದುತ್ತಿರುವಾಗ ಇಷ್ಟು ಜಾಗೃತಿ ಇರಲಿಲ್ಲ ಎಂದರು. ಇನ್ನು ಯಲಹಂಕದ ಜ್ಯುಡಿಶೀಯಲ್ ಲೇಔಟ್ ಜ್ಞಾನ ದೀಪಿಕಾ ಸ್ಕೂಲ್ನಲ್ಲಿ ತಂದೆ ಜೊತೆ ಬಂದು ನಟಿ ರಾಗಿಣಿ ಮತದಾನ ಮಾಡಿದರು.