ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವೆ: ಈಟಿವಿ ಭಾರತ ಜತೆ 'ರಾಧೆಶ್ಯಾಮ್' ನಟಿ ಪೂಜಾ ಹೆಗ್ಡೆ ಮಾತು! - Actor pooja Hegde talk with Etv Bharat
🎬 Watch Now: Feature Video
ಮಂಗಳೂರು: ಅವಕಾಶ ಸಿಕ್ಕರೆ ಖಂಡಿತವಾಗಿ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ನಟನೆ ಮಾಡುವೆ ಎಂದು ನಟಿ ಪೂಜಾ ಹೆಗ್ಡೆ ಹೇಳಿದ್ದಾರೆ. ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ರಾಧೆಶ್ಯಾಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮಂಗಳೂರಿನಲ್ಲಿ ಈಟಿವಿ ಭಾರತದ ಜತೆ ಮಾತನಾಡಿದರು. ಬಾಲಿವುಡ್ನಲ್ಲಿ ರೋಹಿತ್ ಶೆಟ್ಟಿ ಹಾಗೂ ರಣವೀರ್ ಸಿಂಗ್ ಸಿನಿಮಾ ಒಪ್ಪಿದ್ದೇನೆ. ಇನ್ನೇನು ಶೂಟಿಂಗ್ ಆರಂಭಗೊಳ್ಳಬೇಕು ಎಂದರು. 'ರಾಧೆಶ್ಯಾಮ್' ಸಿನಿಮಾ 1970ರ ಯುರೋಪ್ ದೇಶದ ಕಥಾಹಂದರ ಹೊಂದಿದ್ದು, ಅದರಲ್ಲಿ ನನ್ನ ಪಾತ್ರ ಮಾಡರ್ನ್ ಆಗಿದ್ದರಿಂದ ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅನೇಕ ಪುಸ್ತಕ ಓದಿ ತಯಾರಿ ನಡೆಸಿದ್ದೆ ಎಂದು ತಿಳಿಸಿದ್ದಾರೆ.
Last Updated : Feb 20, 2021, 9:04 PM IST