ಅಪ್ಪು ನಿಧನ ಕನ್ನಡ ಚಿತ್ರರಂಗದ ದೊಡ್ಡ ದುರಂತ : ಅಜಯ್ ರಾವ್ - ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ಅಂತಿಮ ದರ್ಶನ
🎬 Watch Now: Feature Video
ಬೆಂಗಳೂರು : ಅಪ್ಪು ಅಕಾಲಿಕ ನಿಧನ ಕನ್ನಡ ಚಿತ್ರರಂಗ ಕಂಡ ಅತೀ ದೊಡ್ಡ ದುರಂತ. ನಾವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ. ಅವರು ಬದುಕು, ನಡೆ-ನುಡಿ ಯುವಕರಿಗೆ ಮಾದರಿಯಾಗಿದೆ. ಇವರಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ ಎನಿಸುತ್ತಿದೆ. ನೈತಿಕ ಮೌಲ್ಯಗಳನ್ನು ಇಟ್ಕೊಂಡು ಬದುಕೋದಾ ಅಥವಾ ದೇವರನ್ನು ನಂಬೋದಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ಅಂತಿಮ ದರ್ಶನ ಪಡೆದು ನಟ ಅಜಯ್ ರಾವ್ ಅಪ್ಪು ವ್ಯಕ್ತಿತ್ವ ಹಾಗೂ ಒಡನಾಟದ ಬಗ್ಗೆ ಮಾತನಾಡಿದರು.