Watch : ಯುವಕನಿಗೆ ಕಾರಿನಿಂದ ಗುದ್ದಿ ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಪರಾರಿ.. - ದೆಹಲಿ ಕಾರು ಅಪಘಾತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14439739-thumbnail-3x2-megha.jpg)
ನವದೆಹಲಿ : ಅತಿ ವೇಗದಲ್ಲಿ ಫೋಕ್ಸ್ ವ್ಯಾಗನ್ ಕಾರು ಚಲಾಯಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಯುವಕನಿಗೆ ಗುದ್ದಿದ್ದಲ್ಲದೇ ಆತನನ್ನು ಕಾರಿನ ಬಾನೆಟ್ ಮೇಲೆ 200 ಮೀಟರ್ ದೂರ ಹೊತ್ತೊಯ್ದು ಪರಾರಿಯಾಗಿದ್ದಾನೆ. ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
Last Updated : Feb 3, 2023, 8:11 PM IST