ನೋಡಿ: ಸಿಖ್ ಸಮುದಾಯದ ಗಣ್ಯರಿಗೆ ಪ್ರಧಾನಿ ಮೋದಿ ಆತಿಥ್ಯ - ಪಂಜಾಬ್ ವಿಧಾನಸಭಾ ಚುನಾವಣೆ
🎬 Watch Now: Feature Video
ನವದೆಹಲಿ: ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆ ಫೆಬ್ರವರಿ 20ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶದ ಸಿಖ್ ಸಮುದಾಯದ ಪ್ರಮುಖ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದ್ದಾರೆ. ದೆಹಲಿ ಗುರುದ್ವಾರ ಕಮಿಟಿಯ ಅಧ್ಯಕ್ಷ ಹರ್ಮಿತ್ ಸಿಂಗ್ ಕಲ್ಕಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಆತಿಥ್ಯವನ್ನು ನೀಡಲಾಗಿದ್ದು, ಇದೇ ವೇಳೆ ಸಿಖ್ ಸಮುದಾಯದ ಮುಖಂಡರು ಕಿರ್ಪಾನ್ ಅನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.
Last Updated : Feb 3, 2023, 8:17 PM IST