ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರು: ಸವಾರರು ಸೇರಿ ಐವರ ಬಂಧನ - ದಕ್ಷಿಣ ಸಂಚಾರ ಠಾಣೆ ಪೊಲೀಸರು
🎬 Watch Now: Feature Video
ಹುಬ್ಬಳ್ಳಿ: ಗದಗ ರಸ್ತೆಯಿಂದ ಕುಂದಗೋಳ ಕ್ರಾಸ್ ಕಡೆ ತೆರಳುವ ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರ ವಿರುದ್ಧ ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಾತ್ರಿ ವೇಳೆ ಬೈಕ್ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುತ್ತಿದ್ದ ಯುವಕರ ಗುಂಪೊಂದನ್ನು ವಿಡಿಯೋ ಆಧರಿಸಿ ದಕ್ಷಿಣ ಸಂಚಾರಿ ಪೊಲೀಸರ ತಂಡದ ಕಾರ್ಯಾಚರಣೆ ಮೂಲಕ ಸದೆ ಬಡಿಯಲಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕುಲಕರ್ಣಿ ಹಕ್ಕಲದ ಸುಜನ್ (19), ಮಂಟೂರ ರಸ್ತೆಯ ಜುಬೇರ್ (21) ಹಾಗೂ ಫರ್ದೀನ್ (18) ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಹಿಂಬದಿಯ ಸವಾರರನ್ನು ವಶಕ್ಕೆ ಪಡೆಯಲಾಗಿದೆ. ವೇಗದ ಸ್ಪರ್ಧೆ ಹಮ್ಮಿಕೊಂಡು ಹಿಂಬದಿಯಲ್ಲಿ ಓರ್ವನನ್ನು ಕುಳ್ಳಿರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದದ್ದು ಮಾತ್ರವಲ್ಲದೇ, ಯುವಕರು ಹೆಲ್ಮೆಟ್ ಕೂಡ ಧರಿಸದೇ ಅತಿ ವೇಗವಾಗಿ ಬೈಕ್ಗಳನ್ನು ಚಲಾಯಿಸಿದ್ದು, ಯುವಕರ ವಿರುದ್ಧ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಬೆಂಗಳೂರಿನ ರಸ್ತೆಯಲ್ಲಿ ಹುಡುಗರ ವ್ಹೀಲಿಂಗ್; ಪೋಷಕರ ವಿರುದ್ಧ ಪ್ರಕರಣ ದಾಖಲು