ಪ್ರಸಿದ್ಧ ತೆಹ್ರಿ ಕೆರೆಯಲ್ಲಿ ಈಜಾಡಲು ಹೋಗಿ ಮುಳುಗುತ್ತಿದ್ದ ಯುವಕನ ರಕ್ಷಣೆ: ವಿಡಿಯೋ - ಉತ್ತರಾಖಂಡದ ತೆಹ್ರಿ
🎬 Watch Now: Feature Video

ಈಜಾಡಲು ಎಂದು ತೆರಳಿ ಸೇತುವೆಯಿಂದ ಹಾರಿ ಕೆರೆಯಲ್ಲಿ ಮುಳುಗುತ್ತಿದ್ದ ಯುವಕನನ್ನು ಅಲ್ಲಿನ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರಾಖಂಡದ ತೆಹ್ರಿಯಲ್ಲಿ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದೆ. ತೆಹ್ರಿಯಲ್ಲಿನ ಪ್ರಸಿದ್ಧ ಕೆರೆಯಲ್ಲಿ ಯುವಕನೊಬ್ಬ ಈಜಾಡಲು ತೆರಳಿದ್ದಾನೆ. ಈ ವೇಳೆ, ನೀರಿನಲ್ಲಿ ಮುಳುಗುತ್ತಿದ್ದಾಗ ಸಿಬ್ಬಂದಿ ಇದನ್ನು ಕಂಡು ಬೋಟ್ ಹಾಕಿಕೊಂಡು ಹೋಗಿ ಯುವಕನನ್ನು ರಕ್ಷಿಸಿದ್ದಾರೆ. ಯುವಕ ನೀರಿನಲ್ಲಿ 25 ನಿಮಿಷಕ್ಕೂ ಹೆಚ್ಚು ಕಾಲ ಈಜುತ್ತಾ ದಡ ಸೇರಲು ಒದ್ದಾಡಿದ್ದಾನೆ. ತೀವ್ರ ಅಸ್ವಸ್ಥನಾಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Feb 3, 2023, 8:31 PM IST