ಮೊದಲ ಬಾರಿ ಮತದಾನ ಮಾಡಿದ ಸಂತಸ.. ಯುವಕ-ಯುವತಿಯರು ಹೇಳಿದ್ದೇನು? - Awareness about voting
🎬 Watch Now: Feature Video
ಬಾಗಲಕೋಟೆ/ಹಾವೇರಿ : ವಿಧಾನಸಭಾ ಚುನಾವಣೆ ಹಿನ್ನೆಲೆ ಮುಧೋಳ ಪಟ್ಟಣದಲ್ಲಿ ಮೊದಲು ಬಾರಿ ಮತದಾನ ಮಾಡುವ ಯುವಕ ಸಂತಸ ವ್ಯಕ್ತಪಡಿಸಿದ್ದಾರೆ. ಮುಧೋಳ ಪಟ್ಟಣದ ನಿವಾಸಿ ವ್ಯಾಸರಾಯ ಕುಲಕರ್ಣಿ ಎಂಬ ಯುವಕ ವಿದ್ಯಾಭ್ಯಾಸ ಮಾಡಲು ಧಾರವಾಡಕ್ಕೆ ಹೋಗಿದ್ದು, ತನ್ನ ಹಕ್ಕು ಚಲಾಯಿಸಲು ಧಾರವಾಡದಿಂದ ಆಗಮಿಸಿದ್ದರು.
ಇದನ್ನೂ ಓದಿ : ಅಜ್ಜಿ, ವಿಶೇಷಚೇತನ ಸಹೋದರಿ ಜೊತೆಗೆ ಬಂದು ಸ್ವಗ್ರಾಮದಲ್ಲಿ ಹಕ್ಕು ಚಲಾಯಿಸಿದ ನಟ ಡಾಲಿ ಧನಂಜಯ್
ಬಳಿಕ ಹಾವೇರಿಯಲ್ಲಿ ಮೊದಲ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಯುವತಿಯರು ಮಾತನಾಡಿ, ಎಲ್ಲರೂ ಸೇರಿ ಒಳ್ಳೆಯ ಅಭ್ಯರ್ಥಿಯನ್ನು ಆರಿಸಿ ತರುವಂತಹ ಕೆಲಸ ಮಾಡೋಣ, ನಾನು ಕೂಡಾ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ ಎಂದು ಹೇಳಿದರು. ಇನ್ನು ವಿಧಾನಸಭಾ ಚುನಾವಣೆಯ ಹಬ್ಬದಲ್ಲಿ ಶೇ 72 ರಷ್ಟು ಮತದಾನವಾಗುವ ಮೂಲಕ ಮುಕ್ತಾಯವಾಗಿದೆ. ಮೇ 13ಕ್ಕೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ. ಮತದಾರರು ನೀಡಿರುವ ಮತಗಳ ಜೊತೆಗೆ ಅದೃಷ್ಟ ಎನ್ನುವುದು ಯಾರ ಕೈ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಮತ ಚಲಾಯಿಸಿದ ರಾಕಿಭಾಯ್: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್ ಮನದಾಳದ ಮಾತು