ಕಾಶಿಯಲ್ಲಿ 'ಗಂಗಾ ಆರತಿ' ಕಣ್ತುಂಬಿಕೊಂಡ ವೈ - 20 ಶೃಂಗಸಭೆಯ ಪ್ರತಿನಿಧಿಗಳು... - ಗಂಗಾ ಆರತಿಗೆ ಸಾಕ್ಷಿ
🎬 Watch Now: Feature Video
ವಾರಣಾಸಿ: ಧರ್ಮ ಮತ್ತು ಆಧ್ಯಾತ್ಮಿಕತೆಯ ನಗರಿ ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿ ಭಾನುವಾರ ವಿಭಿನ್ನ ದೃಶ್ಯ ಕಂಡುಬಂತು. ಘಾಟ್‌ನಲ್ಲಿ ವಿಶೇಷ ರೀತಿಯ ಆರತಿ ಏರ್ಪಡಿಸಲಾಗಿತ್ತು. ಕಾಶಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ವೈ-20 ಶೃಂಗಸಭೆಯ ಕೊನೆಯ ದಿನ ಭಾನುವಾರವಾಗಿತ್ತು. ಇದರಲ್ಲಿ ಭಾಗವಹಿಸಲು ಬಂದಿದ್ದ 20 ದೇಶಗಳ 125 ಪ್ರತಿನಿಧಿಗಳು ವಿಹಾರ ನೌಕೆಯನ್ನು ಹತ್ತಿ ಗಂಗಾ ಆರತಿಯನ್ನು ಕಣ್ತುಂಬಿಕೊಂಡರು. ಗಂಗಾ ಆರತಿಯನ್ನು ವೀಕ್ಷಿಸಿ ಮೈಮರೆತಂತೆ ಕಂಡು ಬಂದರು. ಅವರು ಗಂಗಾ ಆರತಿಯ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.
ಗಂಗಾ ಸೇವಾ ನಿಧಿಯ ಅಧ್ಯಕ್ಷ ಸುಶಾಂತ್ ಮಿಶ್ರಾ ಮಾತನಾಡಿ, ''ಪ್ರವಾಹದಿಂದಾಗಿ ಟೆರೇಸ್ ಮೇಲೆ ಗಂಗಾ ಆರತಿ ಮಾಡಲಾಗುತ್ತಿದೆ. ಪ್ರವಾಹದಿಂದಾಗಿ ಘಾಟ್‌ಗಳ ಪರಸ್ಪರ ಸಂಪರ್ಕವು ಸ್ಥಗಿತಗೊಂಡಿದೆ. ಇದರಿಂದಾಗಿ ಘಾಟ್‌ನಲ್ಲಿ ಆರತಿ ಮಾಡಲು ಸಮಸ್ಯೆ ಉಂಟಾಗಿತ್ತು. ಈ ಕಾರಣಕ್ಕಾಗಿ ಟೆರೇಸ್ ಮೇಲೆ ಗಂಗಾ ಆರತಿ ಮಾಡಲಾಗುತ್ತಿತ್ತು. ಆದರೆ, ವೈ-20 ಶೃಂಗಸಭೆಯ ಕಾರಣ ಭಾನುವಾರ ಘಾಟ್‌ನ ಮೆಟ್ಟಿಲುಗಳ ಮೇಲೆ ವ್ಯವಸ್ಥೆ ಮಾಡಿ, ಗಂಗಾ ಆರತಿ ನೆರವೇರಿಸಲಾಯಿತು. ದಶಾಶ್ವಮೇಧ ಘಾಟ್ ಅನ್ನು 5,100 ದೀಪಗಳಿಂದ ಅಲಂಕರಿಸಲಾಗಿತ್ತು. ವೈ-20ಯ ಆಕೃತಿಯನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರವಾಹದ ಕಾರಣ ಆರತಿಯ ವ್ಯವಸ್ಥೆಯನ್ನು ಟೆರೇಸ್‌ಗೆ ಸ್ಥಳಾಂತರಿಸಲಾಗಿದೆ'' ಎಂದು ಅವರು ಹೇಳಿದರು. ವಿಹಾರದ ನೌಕೆಯಲ್ಲಿ ಕುಳಿತು ವೈ-20 ಅತಿಥಿಗಳು, ಗಂಗಾ ಆರತಿಗೆ ಸಾಕ್ಷಿಯಾದರು. ಈ ವೇಳೆ, ಗಂಗಾ ಸೇವಾ ನಿಧಿಯ ಕಾರ್ಯದರ್ಶಿ ಹನುಮಂತ ಯಾದವ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಅಯೋಧ್ಯೆಯ ಹನುಮಾನ್ ದೇವಸ್ಥಾನದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಪ್ರಾರ್ಥನೆ: ವಿಡಿಯೋ