World University Games: ಭಾರತ ಪ್ರತಿನಿಧಿಸಲಿರುವ ಬೆಂಗಳೂರಿನ ಸ್ವಿಮ್ಮರ್ಸ್ - ಈಟಿವಿ ಭಾರತ್​ ಕನ್ನಡ ನ್ಯೂಸ್

🎬 Watch Now: Feature Video

thumbnail

By

Published : Jul 26, 2023, 11:01 PM IST

ಚೀನಾದ ಚೆಂಗ್ಡುವಿನಲ್ಲಿ ನಡೆಯಲಿರುವ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತ ಈಜು ತಂಡದಲ್ಲಿ ಬೆಂಗಳೂರಿನ ಇಬ್ಬರು ಈಜುಪಟುಗಳು ಸ್ಥಾನ ಪಡೆದಿದ್ದಾರೆ. ಕ್ರೈಸ್ಟ್ ಯೂನಿವರ್ಸಿಟಿಯ ಕಲ್ಪ್ ಎಸ್ ಬೊಹ್ರಾ ಮತ್ತು ಅನೀಶ್ ಎಸ್ ಗೌಡ ಈಜುಪಟುಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.  

ಕ್ರೀಡಾಕೂಟವು ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದ್ದು, 1000 ಕ್ಕೂ ಹೆಚ್ಚು ಕ್ರೀಡಾಪಟುಗಳು ವಿಶ್ವದ ಆನೇಕ ವಿಶ್ವವಿದ್ಯಾಲಯಗಳಿಂದ ಭಾಗವಹಿಸುವ ನಿರೀಕ್ಷೆಯಿದೆ. ಭಾರತ ಈಜು ತಂಡವು 12 ಹುಡುಗಿಯರು ಮತ್ತು 13 ಹುಡುಗರನ್ನು ಒಳಗೊಂಡಿದ್ದು, ಪ್ರಮುಖವಾಗಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನ ಅನುರಾಘ್ ಸಿಂಗ್ ಹಾಗೂ ಜೈನ್ ವಿಶ್ವವಿದ್ಯಾಲಯದ ಅನುಮತಿ ಸಿ ಮತ್ತು ಸರಣ್ ಕೆ ಅವರು ಈಜು ಸ್ಫರ್ಧೆ ತಂಡದಲ್ಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಹೆಮ್ಮೆ ಹಾಗೂ ವಿಶ್ವದ ಹಲವು ವಿಶ್ವವಿದ್ಯಾನಿಲಯಗಳ ಈಜುಗಾರರ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಉತ್ಸಾಹದಲ್ಲಿ ಈಜುಪಟುಗಳು ಎದುರು ನೋಡುತ್ತಿದ್ದಾರೆ.  

ಇದನ್ನೂ ಓದಿ : ಐಎಸ್‌ಎಸ್‌ಎಫ್ ಜೂನಿಯರ್​ ವಿಶ್ವಕಪ್‌ ಶೂಟಿಂಗ್​: ಭಾರತಕ್ಕೆ ಎರಡು ಚಿನ್ನ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.