ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಭಾರತ ತಂಡಕ್ಕೆ ಶುಭಹಾರೈಕೆ - ಟೀಂ ಇಂಡಿಯಾ ಗೆಲ್ಲುವಂತೆ ಅಭಿಮಾನಿಗಳು ಪೂಜೆ
🎬 Watch Now: Feature Video
Published : Nov 19, 2023, 4:19 PM IST
ದಾವಣಗೆರೆ: ಗುಜರಾತ್ ಅಹಮದಾಬಾದ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ಚಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆಯುತ್ತಿರುವ ಹಿನ್ನೆಲೆ ನಗರದ ದೇವಸ್ಥಾನದಲ್ಲಿ ಭಾರತ ತಂಡದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಐತಿಹಾಸಿಕ ಶಾಮನೂರ ಆಂಜನೇಯ ದೇವಸ್ಥಾನದಲ್ಲಿ ಶಾಲಾ ಮಕ್ಕಳು, ಪಾಲಕರು, ಶಿಕ್ಷಕರು ಸೇರಿ ವಿಶೇಷ ಪೂಜೆ ಸಲ್ಲಿಸಿದರು.
ಆಂಜನೇಯ ಸ್ವಾಮಿ ಮುಂದೆ ವಿಶ್ವಕಪ್ ಮಾದರಿ ಇಟ್ಟು ಈ ಬಾರಿಯ ಕಪ್ ಅನ್ನು ಟೀಂ ಇಂಡಿಯಾ ಗೆಲ್ಲಲಿ ಎಂದು ಅಭಿಮಾನಿಗಳು ಪೂಜೆ ಸಲ್ಲಿಸಿದರು. ಈ ಸಲ ವಿಶ್ವಕಪ್ ನಮ್ಮದೇ ಎಂದು ಘೋಷಣೆ ಹಾಕಿದ ಅಭಿಮಾನಿಗಳು, ಆಂಜನೇಯ ದೇವಸ್ಥಾನದಲ್ಲಿ ಸೇರಿದ ಟೀಂ ಇಂಡಿಯಾಕ್ಕೆ ಶುಭಕೋರಿದರು.
ಇದೇ ರೀತಿ ನಗರದ ರಾಮಂಡ ಕೋ ಸರ್ಕಲ್ನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿ ಇಂಡಿಯಾ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದರು. ಬಿಜೆಪಿ ಕಾರ್ಯಕರ್ತರು ಟೀಂ ಭಾರತಕ್ಕೆ ಶುಭಹಾರೈಸಿದ್ದಾರೆ. ಇನ್ನು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ದೊಡ್ಡ ಪರದೆ ಮೇಲೆ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಮಹಾನಗರ ಪಾಲಿಕೆ ಹಾಗೂ ಕ್ರೀಡಾ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.
ಭಾರತ ದೇಶ ಗೆಲುವಿಗೆ ಜಾಥ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಜಯ ಸಾಧಿಸುವಂತೆ ಬೆಂಬಲಿಸಿ ಕ್ರೀಡಾಭಿಮಾನಿಗಳು ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥ ನಡೆಸಿದರು. ಈ ಜಾಥದಲ್ಲಿ ಭಾರತ ಗೆಲ್ಲಲಿ ಎಂಬ ಘೋಷ ವಾಕ್ಯ ಕ್ರೀಡಾಭಿಮಾನಿಗಳಿಂದ ಶುಭಹಾರೈಸಿದರು. ಪುರಸಭೆ ಸದಸ್ಯರಾದ ಚಂದ್ರಶೇಖರ್ ಬಾಬು, ಎಂ ಆರ್ ಜಗನ್ನಾಥ್ ಮತ್ತಿತರರು ಇದ್ದರು.
ಇದನ್ನೂ ಓದಿ:ನೃತ್ಯದ ಮೂಲಕ ಟೀಂ ಇಂಡಿಯಾಗೆ ಶುಭಕೋರಿದ ಕಡಲನಗರಿಯ ಪುಟಾಣಿಗಳು: ವಿಡಿಯೋ