ಕಲಬುರಗಿ : ದೀಪಾವಳಿ ಬೋನಸ್‌ಗಾಗಿ ಒತ್ತಾಯ.. ಟವರ್ ಏರಿ ಪ್ರತಿಭಟಿಸಿದ ಕಾರ್ಮಿಕ - ಈಟಿವಿ ಭಾರತ ಕನ್ನಡ
🎬 Watch Now: Feature Video

ಕಲಬುರಗಿ: ಸಿಮೆಂಟ್ ಕಾರ್ಖಾನೆಯ ಕಾರ್ಮಿಕನೋರ್ವ ದೀಪಾವಳಿ ಬೋನಸ್ ಗಾಗಿ ಕಾರ್ಖಾನೆಯ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ನಡೆದಿದೆ. ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮಹಮ್ಮದ್ ರಶೀದ್ ಬೋನ್ ಟವರ್ ಏರಿ ಕುಳಿತ ಕಾರ್ಮಿಕ. ನಿಯಮದ ಪ್ರಕಾರ ದೀಪಾವಳಿಗೆ ಕಾರ್ಮಿಕರಿಗೆ ಬೋನಸ್ ಕೊಡಬೇಕಿತ್ತು. ಆದರೆ ಕಾರ್ಖಾನೆ ಆಡಳಿತ ಮಂಡಳಿ ಬೋನಸ್ ಕೊಡುತ್ತಿಲ್ಲ ಎಂದು ಕಾರ್ಖಾನೆಯಲ್ಲಿನ ಸೆಲ್ಲೋ ಟವರ್ ಏರಿ ಕುಳಿತು ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ. ಟವರ್ನಿಂದು ಇಳಿದು ಬರುವಂತೆ ಸಹ ಕಾರ್ಮಿಕರು ಒತ್ತಾಯಿಸಿದರೂ ಬೋನಸ್ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಕಾರ್ಮಿಕ ಹಠ ಹಿಡಿದಿದ್ದಾರೆ.
Last Updated : Feb 3, 2023, 8:29 PM IST