ಕಲಬುರಗಿಯಲ್ಲಿ ಚಲಿಸುವ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಮಹಿಳೆ.. ಪ್ರಾಣ ಕಾಪಾಡಿದ ಇಲಾಖೆ ಸಿಬ್ಬಂದಿ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ಕಲಬುರಗಿ : ಚಲಿಸುತ್ತಿರುವ ರೈಲು ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬೀಳುತ್ತಿದ್ದ 50 ವರ್ಷದ ಮಹಿಳೆಯನ್ನು ಆರ್‌ಪಿಎಫ್ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿ ರಕ್ಷಿಸಿರುವ ಘಟನೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ಸಂಜೆ ಮುಂಬೈ ನಾಗರಕೋಯಿಲ್ ರೈಲು ಕಲಬುರಗಿ ನಿಲ್ದಾಣಕ್ಕೆ ಆಗಮಿಸುವಾಗ ಘಟನೆ ನಡೆದಿದೆ. ಈ ಸಂದರ್ಭ ರೈಲು ಚಲಿಸುತ್ತಿರುವಾಗಲೇ ಮಹಿಳೆಯೋರ್ವರು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಬೀಳುತ್ತಿದ್ದ ಮಹಿಳೆಯನ್ನು ಕಂಡ ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಆರ್.ಡಿ. ಶೇರಖಾನ್ ಹಾಗೂ ಕಾರ್ಮಿಕರೋರ್ವರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:38 PM IST