ಚಾಮರಾಜನಗರ: ಕಬ್ಬಿನ ಲಾರಿ ಎಂದು ಬಸ್ ಅಡ್ಡಹಾಕಿದ ಗಜರಾಜ- ವಿಡಿಯೋ - wild elephant stopped the bus in chamarajanagar
🎬 Watch Now: Feature Video
Published : Sep 13, 2023, 2:29 PM IST
ಚಾಮರಾಜನಗರ : ಕಬ್ಬು ತುಂಬಿದ ಲಾರಿ ಎಂದು ಸಾರಿಗೆ ಸಂಸ್ಥೆಯ ಬಸ್ ಅನ್ನು ಗಜರಾಜ ಅಡ್ಡ ಹಾಕಿದ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಅಸನೂರಲ್ಲಿ ನಡೆದಿದೆ. ಈ ಹೆದ್ದಾರಿಯಲ್ಲಿ ಕಬ್ಬು ತುಂಬಿದ ಲಾರಿಗಳು ಸರ್ವೆ ಸಾಮಾನ್ಯವಾಗಿ ಸಂಚರಿಸುವುದರಿಂದ ಲಾರಿ ಎಂದು ಬಸ್ಗೆ ಅಡ್ಡಹಾಕಿದೆ. ಬಳಿಕ ಕಬ್ಬಿಗಾಗಿ ಆನೆ ಹುಡುಕಾಡಿದ್ದು, ಏನೂ ಸಿಗದ ಹಿನ್ನೆಲೆಯಲ್ಲಿ ಪಕ್ಕಕ್ಕೆ ಸರಿದು ಬಸ್ ಮುಂದಕ್ಕೆ ತೆರಳಲು ಅನುವು ಮಾಡಿಕೊಟ್ಟಿದೆ.
ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಹೆದ್ದಾರಿಯಲ್ಲಿ ಗಜರಾಜ ಅಡ್ಡ ನಿಂತ ಪರಿಣಾಮ ಅರ್ಧ ಗಂಟೆ ಟ್ರಾಫಿಕ್ ಜಾಮ್ ಉಂಟಾಗಿ, ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.
ಇನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಕೇರಳದಲ್ಲಿ ಕರ್ನಾಟಕದ ಯುವಕರಿಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ವಯನಾಡ್ ವನ್ಯಜೀವಿ ಅಭಯಾರಣ್ಯದ ಮುತಂಗ - ಬಂಡಿಪುರ ಪ್ರದೇಶದಲ್ಲಿ ಘಟನೆ ನಡೆದಿತ್ತು. ಯುವಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೈಕ್ ಬಿಟ್ಟು ಓಡಿ ಹೋಗಿದ್ದು, ಈ ಕುರಿತಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ : ಯುವಕರ ಬೈಕ್ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!