ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೈತ್ಯ ಕಾಡಾನೆ.. ಕಾಡಿಗೆ ಹಿಮ್ಮೆಟ್ಟಿಸಿದ ಅರಣ್ಯಾಧಿಕಾರಿಗಳು - Elephant on Ooty National Highway
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16056536-thumbnail-3x2-zsdbnvfyewftr.jpg)
ಕೊಯಮತ್ತೂರು: ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನ ಜನವಸತಿ ಪ್ರದೇಶಗಳಲ್ಲಿ ಕಳೆದೊಂದು ತಿಂಗಳಿನಿಂದ ಕಾಡಾನೆ ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದರು. ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ಈವರೆಗೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ನಿನ್ನೆ ರಾತ್ರಿ ಮತ್ತೆ ಜನನಿಬಿಡ ಮೆಟ್ಟುಪಾಳ್ಯಂ-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಕೆಲವು ವಾಹನ ಸವಾರರು ವಾಹನಗಳ ಹಾರ್ನ್ ಮಾಡುತ್ತ ಮುಂದೆ ಸಾಗಲು ಯತ್ನಿಸಿದರು. ಇದರಿಂದ ಕುಪಿತಗೊಂಡ ಕಾಡಾನೆ ರಸ್ತೆ ಬದಿ ಉದ್ಯಾನವನದ ಕಬ್ಬಿಣದ ಗೇಟ್ ಮತ್ತು ಕಂಪೌಂಡ್ ಒಡೆದು ಒಳ ಪ್ರವೇಶಿಸಿ ಅವಾಂತರ ಸೃಷ್ಟಿಸಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಸಮೀಪದ ಕಾಡಿಗೆ ಓಡಿಸಿದ್ದಾರೆ.
Last Updated : Feb 3, 2023, 8:26 PM IST