ದೇಗುಲಕ್ಕೆ ಕನ್ನ ಹಾಕಲು ಬರುತ್ತಿದ್ದಂತೆ ಮೊಳಗಿದ ಸೈರನ್: ಕಳ್ಳರು ಪರಾರಿ-ಸಿಸಿಟಿವಿ ದೃಶ್ಯ - ದೇಗುಲಕ್ಕೆ ಕನ್ನ ಹಾಕಲು ಬರುತ್ತಿದ್ದಂತೆ ಮೊಳಗಿದ ಸೈರನ್

🎬 Watch Now: Feature Video

thumbnail

By ETV Bharat Karnataka Team

Published : Sep 30, 2023, 12:58 PM IST

Updated : Sep 30, 2023, 1:23 PM IST

ಚಾಮರಾಜನಗರ: ದೇವಾಲಯಕ್ಕೆ ಕನ್ನ ಹಾಕಲು ವಿಫಲ ಯತ್ನ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಳೆದ ರಾತ್ರಿ ನಡೆದಿದೆ. ಟವೆಲ್​ನ್ನು ಮುಖಕ್ಕೆ ಕಟ್ಟಿಕೊಂಡು ಒಳ ಬಂದಿದ್ದ ಚಾಲಾಕಿಗಳು ಹಾರೆಯ ಸಹಾಯದಿಂದ ದೇಗುಲದ ಒಳಬಾಗಿಲನ್ನು ಮೀಟಿದ ವೇಳೆ ಸೈರನ್ ಮೊಳಗಿದೆ.‌ ಇದರಿಂದ, ಬೆಚ್ಚಿಬಿದ್ದ ಇಬ್ಬರು ಖದೀಮರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬರಿಗೈಯಲ್ಲಿ ಕಾಲ್ಕಿತ್ತಿದ್ದಾರೆ. ಹುಂಡಿ ಕದಿಯಲು ಬಂದಿದ್ದ ಇಬ್ಬರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೂರನೇ ಬಾಗಿಲಿನ ಬೀಗಕ್ಕೆ ಹಾರೆಯಿಂದ ಮೀಟಿದಾಗ ಸೈರನ್ ಆನ್ ಆಗಿದ್ದರಿಂದ ಹುಂಡಿ ಕಳವು ವಿಫಲವಾಗಿದೆ‌‌. ಅಧಿಕ ಆದಾಯ ಬರುವ ದೇವಾಲಯಗಳಲ್ಲಿ ಸಿದ್ದರಾಮೇಶ್ವರ ದೇವಾಲಯವೂ ಒಂದಾಗಿರುವುದರಿಂದ ಕಳ್ಳರು ಕಣ್ಣಿಟ್ಟಿದ್ದರು. ಸದ್ಯ, ಸ್ಥಳಕ್ಕೆ ಚಾಮರಾಜನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ದೊಡ್ಡಬಳ್ಳಾಪುರದಲ್ಲೂ ಕಳ್ಳತನ (ಹಳೇ ಪ್ರಕರಣ): ಒಂದೇ ರಾತ್ರಿ ಎರಡು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು 5 ಮಾಂಗಲ್ಯ ಸರ, 18 ಚಿನ್ನದ ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ನಡೆದಿತ್ತು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಎರಡು ದೇವಸ್ಥಾನಗಳಲ್ಲಿ 5 ಮಾಂಗಲ್ಯ ಸರ, 18 ಚಿನ್ನ ಗುಂಡುಗಳು ಕಳವು

Last Updated : Sep 30, 2023, 1:23 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.