ಚಾಮರಾಜನಗರದಲ್ಲಿ ಮೈನವಿರೇಳಿಸುವ ಜಲ ಸಾಹಸ... ವರ್ಷವಿಡೀ ಆಯೋಜನೆ ಚಿಂತನೆ
🎬 Watch Now: Feature Video
ಚಾಮರಾಜನಗರ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜಲ ಸಾಹಸ ಕ್ರೀಡೆ ಆಯೋಜಿಸಲಾಗಿತ್ತು. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯಲ್ಲಿ ನಡೆದ ಕ್ರೀಡೆಯು ಯುವಕರ ಮೈ ಮನಗಳಿಗೆ ಮುದ ನೀಡಿತು. ಮೈನವಿರೇಳಿಸುವ ರಾಫ್ಟಿಂಗ್, ಮೈ ಜುಮ್ಮೆನಿಸುವ ಕಯಾಕಿಂಗ್, ದೇಹ ತಂಪಾಗಿಸುವ ಬನಾನ ರೈಡ್, ರೋಚಕ ಸ್ಪೀಡ್ ಬೋಟ್, ನೀರನ್ನು ಸೀಳಿ ಮುನ್ನುಗ್ಗುವ ಜೆಟ್ ಸ್ಕೀ ರೈಡ್ ಹೀಗೆ ಹಲವು ಬಗೆಯ ಜಲಸಾಹಸ ಕ್ರೀಡೆಗಳಲ್ಲಿ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಾಗೆಯೇ, ಈ ಜಲ ಕ್ರೀಡೆಯನ್ನು ವರ್ಷವಿಡೀ ನಡೆಸುವ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಂತೆ ಒತ್ತಾಯ ಕೂಡ ಕೇಳಿ ಬಂತು.
"ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಈ ಜಲಸಾಹಸ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಸುವರ್ಣಾವತಿ ಜಲಾಶಯದಲ್ಲಿ ಪ್ರಾಯೋಗಿಕವಾಗಿ ಉಚಿತವಾಗಿ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಯುವ ಜನರ ಸ್ಪಂದನೆಯನ್ನು ಗಮನಿಸಿದ ಚಾಮರಾಜನಗರ ಜಿಲ್ಲಾಡಳಿತ ವರ್ಷವಿಡೀ ಜಲಸಾಹಸ ಕ್ರೀಡೆ ಆಯೋಜಿಸಲು ಚಿಂತನೆ ನಡೆಸಿದೆ" ಎಂದು ಜಿಲ್ಲಾ ಯುವಜನ ಹಾಗೂ ಕ್ರೀಡಾ ನಿರ್ದೇಶಕಿ ಅನಿತಾ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡ: ಬಂದ್ ಆಗಿದ್ದ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್