ತಲೆ ತಿರುಗಿ ರೈಲ್ವೇ ಹಳಿ ಮಧ್ಯೆ ಬಿದ್ದ ಮಹಿಳೆ ಸಾವನ್ನೇ ಗೆದ್ದಳು - ವಿಡಿಯೋ ವೈರಲ್ - ಮಹಿಳೆಗೆ ಸಣ್ಣಪುಟ್ಟ ಗಾಯ
🎬 Watch Now: Feature Video
ಕಾಸ್ಗಂಜ್ (ಉತ್ತರ ಪ್ರದೇಶ) : ರೈಲ್ವೇ ಹಳಿ ಮಧ್ಯೆ ತಲೆ ತಿರುಗಿ ಬಿದ್ದಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹರಿ ಪ್ಯಾರಿ ಎಂಬ ಮಹಿಳೆಯೊಬ್ಬರು ಔಷಧಿ ಖರೀದಿಸಲು ಸಹಾವರ ಬಳಿಯ ರೈಲ್ವೇ ಹಳಿ ದಾಟಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಮಹಿಳೆ ತಲೆ ತಿರುಗಿ ರೈಲ್ವೇ ಹಳಿ ಮಧ್ಯೆ ಬಿದ್ದಿದ್ದಾರೆ. ಹಳಿಗಳ ಮಧ್ಯ ಬಿದ್ದ ಮಹಿಳೆಯನ್ನು ಕಂಡ ಜನರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಗೂಡ್ಸ್ ರೈಲೊಂದು ಹಳಿ ಮೇಲೆ ಬಂದಿದೆ. ಈ ಗೂಡ್ಸ್ ರೈಲಿನ ಬೋಗಿಗಳು ಹಳಿ ಮೇಲೆ ಹೋಗುವಾಗ ಮಹಿಳೆಗೆ ಪ್ರಜ್ಞೆ ಬಂದಿದ್ದು, ಅಲ್ಲಿದ್ದ ಜನರು ಮಹಿಳೆಗೆ ಹಾಗೆ ಮಲಗುವಂತೆ ಸೂಚಿಸಿದ್ದಾರೆ.
ಈ ವೇಳೆ ಮಹಿಳೆ ಹಳಿಯ ಮಧ್ಯದಲ್ಲೇ ಅಲುಗಾಡದೇ ಮಲಗಿದ್ದು, ರೈಲು ತೆರಳಿದ ಬಳಿಕ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯವನ್ನು ವ್ಯಕ್ತಿಯೋರ್ವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಹಿಳೆ ಪ್ರಜ್ಞೆ ತಪ್ಪಿ ಹಳಿಗಳ ಮಧ್ಯೆ ಬಿದ್ದಿರುವುದನ್ನು ಕಾಣಬಹುದು. ರೈಲು ಹಾದು ಹೋಗುವಾಗ ಮಹಿಳೆಗೆ ಪ್ರಜ್ಞೆ ಬಂದಿದ್ದು, ಈ ವೇಳೆ ಸ್ಥಳದಲ್ಲಿದ್ದವರು ಕೈ ಕಾಲು ಕದಲಿಸಬೇಡಿ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಮಹಿಳೆ ರೈಲು ಹಾದು ಹೋಗುವವರೆಗೂ ಅಂತೆಯೇ ಮಲಗಿದ್ದರು.
ಇದನ್ನೂ ಓದಿ : ರಾಮನಗರದಲ್ಲಿ ಕಾಡಾನೆಗಳ ಹಿಂಡು-ವೀಡಿಯೊ