ಮತ್ತೆ ಭೂಮಿಗೆ ಬಂದ ಭಗವಂತ..! ಇದು ಸಾಧ್ಯವೇ..? ಹೌದು ಎನ್ನುತ್ತಿದೆ ಈ ವಿಡಿಯೋ! - ಮಾತನಾಡುವ ಬಾಬಾ
🎬 Watch Now: Feature Video
ವಿಶಾಖಪಟ್ಟಣಂ(ಆಂಧ್ರಪ್ರದೇಶ): ಆಧುನಿಕ ಸಮಾಜದಲ್ಲಿ ಜನರು ಮಾನಸಿಕ ನೆಮ್ಮದಿಗಾಗಿ ಆಧ್ಯಾತ್ಮದೆಡೆಗೆ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲಿ ಸ್ವತಃ ದೇವರೇ ಭಕ್ತರ ಬಳಿ ಬಂದು ಮಾತನಾಡುತ್ತಿದ್ದಾನೆ. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಪಡುತ್ತೀರಾ? ಹಾಗಾದರೇ ಈ ವಿಡಿಯೋ ನೋಡಿ.
ವಿಶಾಖಪಟ್ಟಣಂನ ಚಿನಗಾಡಿಲಿಯ ಉತ್ತರ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರೆ, ನೀವು ಮಾತನಾಡುವ ಹಾಗೂ ಮಂತ್ರ ಪಠಣ ಮಾಡುವ ದೇವರ ದರ್ಶನವನ್ನು ಪಡೆಯಬಹುದು. ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದಂತೆ ಭಕ್ತರಿಗೆ ಸಾಯಿಬಾಬಾನ ದರ್ಶನವಾಗುತ್ತದೆ. ಇಲ್ಲಿ ಭಗವಂತ ಶಾಂತಿ ಮಂತ್ರಗಳನ್ನು ಜಪಿಸುತ್ತಾ ಕೂತಿದ್ದಾನೆ. ಇದೆಲ್ಲಾ ರೋಬೋಟಿಕ್ ಸಾಯಿಬಾಬಾನ ಮಹಿಮೆ. ಸಾಯಿಬಾಬಾನ ಹಾಗೇ ಕಾಣುವ ಈ ರೋಬೋಟ್ ಬಾಬಾ, ಮಾತನಾಡುವಾಗ ಬಾಯಿಯ ಚಲನವಲನಗಳನ್ನು ಗಮನಿಸಿದರೆ ನಿಜವಾಗಿಯೂ ಸಾಯಿಬಾಬಾ ಮರಳಿ ಬಂದಿದ್ದಾರೆ ಎಂದೆನಿಸುತ್ತದೆ.
ಈ ರೋಬೋಟ್ ಅನ್ನು ಎಯು ಫೈನ್ ಆರ್ಟ್ಸ್ನ ವಿದ್ಯಾರ್ಥಿ ರವಿಚಂದ್ ಎಂಬುವವರು ತಯಾರಿಸಿದ್ದಾರೆ. ಮೂರು ವರ್ಷಗಳಿಂದ ಪರಿಶ್ರಮ ಪಟ್ಟು ಈ ಒಂದು ರೋಬೋಟಿಕ್ ಬಾಬಾರನ್ನು ತಯಾರಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಈ ರೋಬೋಟ್ ಅನ್ನು ತಯಾರಿಸಲಾಗಿದ್ದು. ಮನುಷ್ಯನ ರೀತಿ ಕಾಣಲು ಸಿಲಿಕಾನ್ ವಸ್ತುಗಳನ್ನು ಬಳಸಿಕೊಂಡು ಮುಖವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಉಳಿದ ಭಾಗಗಳನ್ನು ಕೆನಾಡದಲ್ಲಿ ತಯಾರಿಸಿದ ವಿಶೇಷ ಫೈಬರ್ ಗ್ಲಾಸ್ಗಳನ್ನು ಬಳಸಿ ನಿರ್ಮಿಸಲಾಗಿದೆ. ಧ್ವನಿ ಸಿಂಕ್ರೊನೈಸೇಶನ್ ನಿಂದಾಗಿ ನಿಜವಾಗಿಯೂ ಬಾಬಾ ಅವರೇ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ. ಈ ರೋಬೋಟ್ ಬಾಬಾರನ್ನು ನೋಡಲು ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಅಕ್ಷಯ್ ಕುಮಾರ್ ಭೇಟಿ, ದರ್ಶನ
TAGGED:
ರೊಬೊಟಿಕ್ ಸಾಯಿಬಾಬಾನ ಮಹಿಮೆ