ನಡು ರಸ್ತೆಯಲ್ಲಿ ಯುವಕನಿಗೆ ಅಮಾನುಷವಾಗಿ ಥಳಿಸಿದ ದುಷ್ಕರ್ಮಿಗಳು: ವೈರಲ್ ವಿಡಿಯೋ - ಉತ್ತರ ಪ್ರದೇಶ
🎬 Watch Now: Feature Video
ಗೋರಖ್‌ಪುರ(ಉತ್ತರ ಪ್ರದೇಶ): ಯುವಕನನ್ನು ಮನಬಂದಂತೆ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (GIDA) ಪ್ರದೇಶದ ಶಾಲೆಯೊಂದರ ಎದುರಿನ ಹೆದ್ದಾರಿಯಲ್ಲಿ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ನಂತರ ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಡಿಯೋ ವೈರಲ್ ಆದ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಸಂತ್ರಸ್ತ ಯುವಕನನ್ನು ಗುರುತಿಸಿ ಠಾಣೆಗೆ ಕರೆಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆ ಬಲೆ ಬೀಸಲಾಗಿದೆ.
ಪೊಲೀಸರ ಪ್ರಕಾರ "ವೈರಲ್ ಆದ ವಿಡಿಯೋದಲ್ಲಿ ಥಳಿತಕ್ಕೊಳಗಾದ ಯುವಕ ಬಿಆರ್‌ಡಿ ವೈದ್ಯಕೀಯ ಕಾಲೇಜು ಬಳಿ ವಾಸವಾಗಿದ್ದಾನೆ. ಅವರ ಹೆಸರು ಮನೀಶ್ ಕೃಷ್ಣ ಪಾಂಡೆ. ಒಂದು ವಾರದ ಹಿಂದೆ ಮನೀಶ್ ತನ್ನ ಮೂವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದನಂತೆ. ಗೆಳೆಯರೊಂದಿಗೆ ನಡೆದುಕೊಂಡು ಹೋಗುವಾಗ ಹುಡುಗಿಯೊಬ್ಬಳ ಬಗ್ಗೆ ಕಾಮೆಂಟ್ ಮಾಡಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಈ ವಿಷಯ ತಿಳಿದ ಕೆಲಯುವಕರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ, ಆತನ ಉಳಿದ ಸ್ನೇಹಿತರು ಓಡಿ ಹೋಗಿದ್ದಾರೆ. ಆದರೆ, ಮನೀಶ್ ಮಾತ್ರ ಸಿಕ್ಕಿಬಿದ್ದಿದ್ದ. ಆಗ ಆತನ ಮೇಲೆ ಹಲ್ಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಆತನನ್ನು ರಕ್ಷಿಸಲು ಬಾಲಕಿಯೊಬ್ಬಳು ಬಂದಿದ್ದು, ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಒಂದು ವಾರದ ಹಿಂದೆ ನಡೆದ ಘಟನೆಯ ವಿಡಿಯೋ" ಎಂದು ಎಸ್ಪಿ ಮನೋಜ್ ಅವಸ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಕಬಡ್ಡಿ ಪ್ರವರ್ತಕ 'ಕಮಲಜಿತ್ ಕಾಂಗ್' ಮೇಲೆ ಗುಂಡಿನ ದಾಳಿ