ಪುಣ್ಯ ಸ್ನಾನ ಮಾಡುವ ಅಯೋಧ್ಯೆಯ ಸ್ಥಳದಲ್ಲಿ ಯುವಕನ ಜಾಲಿ ಬೈಕ್ ರೈಡ್: ವಿಡಿಯೋ - ಪುಣ್ಯ ಸ್ನಾನ ಮಾಡುವ ಅಯೋಧ್ಯೆಯ ಸ್ಥಳದಲ್ಲಿ ಯುವಕನ ಜಾಲಿ ಬೈಕ್ ರೈಡ್
🎬 Watch Now: Feature Video
ಅಯೋಧ್ಯೆ: ಕಳೆದ ಹದಿನೈದು ದಿನಗಳ ಹಿಂದೆ ರಾಮ್ ಕಿ ಪೈಡಿ ಕ್ಯಾಂಪಸ್‌ನಲ್ಲಿ ವಿವಾಹಿತ ದಂಪತಿ ಅಶ್ಲೀಲವಾಗಿ ನಡೆದುಕೊಂಡಿದ್ದ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಘಟನೆ ಜರುಗಿದೆ. ಮತ್ತೊಮ್ಮೆ ರಾಮ್ ಕಿ ಪೈಡಿ ಕಾಂಪ್ಲೆಕ್ಸ್‌ನಿಂದ ವಿವಾದಾತ್ಮಕ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಅಯೋಧ್ಯೆಯ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಬೈಕ್ ಓಡಿಸುತ್ತಿದ್ದು, ಹಲವರು ಆತನ ವಿಡಿಯೋ ಮಾಡುತ್ತಿದ್ದಾರೆ. ಸಾವಿರಾರು ಮಂದಿ ಇಲ್ಲಿ ಪುಣ್ಯ ಸ್ನಾನ ಮಾಡುತ್ತಿರುತ್ತಾರೆ. ಆದರೆ, ಯುವಕ ಈ ರೀತಿ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿಗೆ ಅಗತ್ಯ ಭದ್ರತೆ ಒದಗಿಸಬೇಕು ಎಂದು ಭಕ್ತರು ಆಗ್ರಹ ಮಾಡಿದ್ದಾರೆ.
Last Updated : Feb 3, 2023, 8:24 PM IST