ಟಿಪ್ಪರ್ ಹಿಂಭಾಗ ಸಿಲುಕಿಕೊಂಡು ಕಿಲೋಮೀಟರ್ ದೂರ ಸಾಗಿದ ಕಾರು: ವಿಡಿಯೋ
🎬 Watch Now: Feature Video
ಉಡುಪಿ: ಡಿಕ್ಕಿ ಹೊಡೆದು ಟಿಪ್ಪರ್ ಲಾರಿಯ ಹಿಂಭಾಗ ಸಿಕ್ಕಿಹಾಕ್ಕೊಂಡು ಸ್ಯಾಂಟ್ರೋ ಕಾರನ್ನು ಟಿಪ್ಪರ್ ಚಾಲಕ ಕಿಲೋಮೀಟರ್ ದೂರದವರೆಗೆ ಎಳೆದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಸಾಗರದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಬೆಳ್ಮಣ್‌ನಿಂದ ಬೈಕಂಪಾಡಿ ಪ್ರದೇಶಕ್ಕೆ ಟಿಪ್ಪರ್ ಚಲಿಸುತ್ತಿತ್ತು. ಈ ವೇಳೆ ಕಾರು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಹಿಂಬದಿ ಸಿಲುಕಿಕೊಂಡಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಟಿಪ್ಪರ್ ಲಾರಿ ವೇಗ ಹೆಚ್ಚಿಸಿದ್ದಾನೆ.
ಅಪಘಾತದ ಕಾರಣಕ್ಕೆ ಸಾರ್ವಜನಿಕರು ತನ್ನನ್ನು ಹಿಡಿದು ಥಳಿಸಬಹುದು ಎಂಬ ಆತಂಕದಿಂದ ವೇಗವಾಗಿ ಟಿಪ್ಪರ್ ಚಲಾಯಿಸಿದ್ದಾನೆ. ಆದರೆ ಆತನಿಗೆ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ಗೊತ್ತಾಗಲಿಲ್ಲ. ಇದನ್ನು ನೋಡಿದ ಕೆಲವರು ಟಿಪ್ಪರ್ ಹಿಂಬಾಲಿಸಿಕೊಂಡು ಬಂದು ಬೊಬ್ಬೆ ಹೊಡೆದು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ಚಾಲಕ ಟಿಪ್ಪರ್ ನಿಲ್ಲಿಸಿದ್ದು, ಪಡುಬಿದ್ರೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯಗಳಾಗಿವೆ. ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಂದ ಮಾಹಿತಿ ಪಡೆದು ಕೇಸು ದಾಖಲಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಧಗ ಧಗ ಉರಿದ ನಡು ರಸ್ತೆಯಲ್ಲಿಯೇ ನಿಂತಿದ್ದ ಬಸ್.. ವಿಡಿಯೋ