ಮದುವೆ ಮಂಟಪದಲ್ಲಿ ಗೂಳಿ ಕಾಳಗ: ವೈರಲ್ ವಿಡಿಯೋ - gujarat viral video
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17978308-thumbnail-4x3-sa.jpg)
ಗುಜರಾತ್: ಗುಜರಾತ್ನ ಅಮ್ರೆಲಿ ಜಿಲ್ಲೆಯ ಚಲಾಲ್ ಎಂಬ ಗ್ರಾಮದಲ್ಲಿ ಮದುವೆ ಮಂಟಪದಲ್ಲಿ ಗೂಳಿ ಕಾಳಗ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರೆಯದೇ ಮದುವೆಗೆ ಆಗಮಿಸಿದ ಈ ಎರಡು ಅತಿಥಿಗಳು ಮದುವೆ ಮಂಟಪವನ್ನು ರಣರಂಗವನ್ನಾಗಿಸಿದ್ದವು. ಸುಮಾರು 30 ನಿಮಿಷಗಳ ಕಾಲ ಎರಡು ಗೂಳಿ ಪರಸ್ಪರ ಗುದ್ದಾಡಿಕೊಂಡಿವೆ. ಗೂಳಿಗಳ ಈ ರಂಪಾಟದಿಂದ ಮದುವೆ ಸಮಾರಂಭವನ್ನು ಅರ್ಧಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು.
ಮದುವೆ ಬಂದಿದ್ದ ಅತಿಥಿಗಳು ಕುತೂಹಲದಿಂದ ಗೂಳಿಗಳು ಗುದ್ದಾಡುವುದನ್ನು ವೀಕ್ಷಿಸಿ ತಮ್ಮ ಮೊಬೈಲ್ನಲ್ಲಿ ಪೋಟೋ, ವಿಡಿಯೋ ಮಾಡಿಕೊಂರು. ಕಾಳಗದ ವೇಳೆ ಗೂಳಿಗಳ ಮೇಲೆ ನೀರು ಹಾಕಿ ಓಡಿಸಲು ಪ್ರಯತ್ನಪಟ್ಟರಾದರು ಯಾರು ಹತ್ತಿರ ಹೋಗುವ ಸಾಹಸ ಮಾಡಲಿಲ್ಲ. ಸತತವಾಗಿ ಗುದ್ದಾಡ ನಡೆಸಿದ ಗೂಳಿ ಸುಸ್ತಾದ ನಂತರ ಮದುವೆ ಮನೆಯಿಂದ ನಿರ್ಗಮಿಸಿದವು. ಅರ್ಧಕ್ಕೆ ನಿಂತಿದ್ದ ಮದುವೆ ಕಾರ್ಯಕ್ರಮ ಮತ್ತೆ ಆರಂಭವಾಯಿತು. ಈ ಗೂಳಿ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟಿಜೆನ್ಸ್ಗಳು ತಮಾಷೆಯ ಕಮೆಂಟ್ಸ್ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಾರ್ಜಿಂಗ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ: ಮನೆ ಬೆಂಕಿಗಾಹುತಿ