ಸಹಾಯಕನ ಕೈಯಿಂದ ತಮ್ಮ ಶೂ ತೆಗೆಸಿದ ಜಿಲ್ಲಾಧಿಕಾರಿ: ಕ್ಯಾಮರಾದಲ್ಲಿ ದೃಶ್ಯ ಸೆರೆ - Etv Bharat Kannada
🎬 Watch Now: Feature Video
ಕಲ್ಲಕುರಿಚಿ (ತಮಿಳುನಾಡು): ಕಲ್ಲಾಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾದಾವತ್ ತಾವು ಧರಿಸಿದ್ದ ಶೂಗಳನ್ನು ಸಹಾಯಕರೊಬ್ಬರ ಕೈಗಳಿಂದ ತೆಗೆಸಿರುವ ವಿಡಿಯೋ ವೈರಲ್ ಆಗಿದೆ. ಡಿಸಿ ನಡೆ ವಿವಾದಕ್ಕೆ ಕಾರಣವಾಗಿರುವುದಲ್ಲದೇ ತೀವ್ರ ವಿರೋಧ ವ್ಯಕ್ತವಾಗಿದೆ.
ಜಿಲ್ಲೆಯ ಉಲುಂದೂರುಪೇಟೆ ಬಳಿಯ ವಿಶ್ವವಿಖ್ಯಾತ ಕೂವಾಗಂ ಕೂತಾಂಡವರ್ ದೇವಸ್ಥಾನದಲ್ಲಿ ವಾರ್ಷಿಕ ಚಿತಿರೈ ಉತ್ಸವವು ಏಪ್ರಿಲ್ 18ರಿಂದ ಆರಂಭವಾಗಲಿದೆ. ಮೇ 2ರಂದು ತೃತೀಯ ಲಿಂಗಿಗಳಿಗೆ ತಾಳಿ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು, ಮೇ 3ರಂದು ರಥೋತ್ಸವ ಜರುಗಲಿದೆ. ಈ ಉತ್ಸವದ ಪೂರ್ವಸಿದ್ಧತಾ ಕಾರ್ಯಗಳ ಪರಿಶೀಲನೆಗೆ ಡಿಸಿ ಶ್ರವಣ್ ಕುಮಾರ್ ನಿನ್ನೆ (ಏಪ್ರಿಲ್ 11) ದೇವಾಲಯಕ್ಕೆ ನೀಡಿದ್ದರು.
ಇದೇ ವೇಳೆ, ದೇವಾಲಯದ ಒಳಗೆ ಪ್ರವೇಶಿಸಿ ದೇವರ ದರ್ಶನಕ್ಕೆ ಪಡೆದರು. ಆದರೆ, ಇದಕ್ಕೂ ಮುನ್ನ ದೇಗುಲದ ಪ್ರವೇಶ ದ್ವಾರದಲ್ಲಿ ಡಿಸಿ ಶ್ರವಣ್ ತಮ್ಮ ಶೂಗಳನ್ನು ತೆಗೆದರು. ಆಗ ತಕ್ಷಣವೇ ಅವುಗಳನ್ನು ತೆಗೆದುಕೊಂಡು ಹೋಗುವಂತೆ ತಮ್ಮ ಸಹಾಯಕನಿಗೆ ಸೂಚಿಸಿದರು. ಅಂತೆಯೇ, ಡಿಸಿ ಕರೆದರು ಎಂಬ ಅವಸರದಲ್ಲಿ ಬಂದ ಸಹಾಯಕ ತಮ್ಮ ಕೈಯಲ್ಲಿ ಶೂಗಳನ್ನು ಎತ್ತಿಕೊಂಡು ಹೋದರು. ಇದರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಕಿರಾಣಿ ಅಂಗಡಿಯ ಬೀಗ ಮುರಿಯಲು ಯತ್ನಿಸಿದ ಕರಡಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ