ಬಂಡೀಪುರ: ಗಾಯಗೊಂಡು ಕುಂಟುತ್ತಾ ರಸ್ತೆ ದಾಟಿದ ಮರಿಯಾನೆ- ವಿಡಿಯೋ - ಆನೆ ವಿಡಿಯೋಗಳು
🎬 Watch Now: Feature Video
ಚಾಮರಾಜನಗರ: ಮರಿಯಾನೆಯೊಂದು ಗಾಯಗೊಂಡು ಕುಂಟುತ್ತಾ ಸಾಗಿದ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ಸೆರೆಯಾಗಿದೆ. ತಾಯಿ ಆನೆ ಜೊತೆ ಹೆಜ್ಜೆ ಹಾಕಿದ ಮರಿಯಾನೆಯ ಎಡಗಾಲಿಗೆ ಪೆಟ್ಟಾಗಿದೆ. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಎರಡು ದೊಡ್ಡ ಆನೆಗಳು ಹಾಗು ಇನ್ನೆರಡು ಮರಿಯಾನೆಗಳು ರಸ್ತೆ ದಾಟುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.
ಕಾಲು ನೋವಿನಿಂದ ಬಳಲುತ್ತಿರುವ ಮರಿಯಾನೆಗೆ ಮತ್ತೊಂದು ಆನೆ ನೆರವಿಗೆ ಬರುವುದು ವೀಡಿಯೋದಲ್ಲಿದೆ. ಮರಿಯಾನೆಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ. ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪುಂಡಾನೆ ಸೆರೆ: ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪೊನ್ನಾಚಿ ಗ್ರಾಮದ ಸುತ್ತಮುತ್ತ ತೊಂದರೆ ನೀಡುತ್ತಿದ್ದ ಕಾಡಾನೆಯನ್ನು ಗೆರಟ್ಟಿಕತ್ರಿ ಅರಣ್ಯ ಪ್ರದೇಶದಲ್ಲಿ ಆನೆ ಅರ್ಜುನ ಮತ್ತು ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರ್ಜುನನ ನಾಯಕತ್ವದಲ್ಲಿ ಒಟ್ಟು 6 ಆನೆಗಳು ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಆಪರೇಷನ್ ಪುಂಡಾನೆ ಸಕ್ಸಸ್ : ಅರ್ಜುನನ ಚಕ್ರವ್ಯೂಹಕ್ಕೆ ಕಾಡಾನೆ ಬಂಧಿ