ಬಿಸಿಲ ಬೇಗೆಯಿಂದ ಸುಡುತಿದ್ದ ಧರೆಗೆ ತಂಪೆರದ ವರುಣ: ಕೊಡಗಿನಲ್ಲಿ ಉತ್ತಮ ಮಳೆ
🎬 Watch Now: Feature Video
ಕೊಡಗು: ಕೊಡಗಿನ ಹಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಈ ಮೂಲಕ ಬಿಸಿಲ ಬೇಗೆಯಿಂದ ಸುಡುತಿದ್ದ ಧರೆಗೆ ವರುಣ ತಂಪೆರೆದಿದ್ದಾನೆ. ಕಾಫಿ ಬೆಳೆಗೆ ಮಳೆ ಬೇಕಾಗಿದ್ದು ಮಳೆ ಬಿದ್ದ ಕಾರಣ ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟು ದಿನ ಬೋರ್ ಮೂಲಕ ಕಾಫಿ ಬೆಳೆಗೆ ನೀರು ಹಾಕುತ್ತಿದ್ದು, ಈಗ ಮಳೆ ಬಿದ್ದರಿರುವ ಕಾರಣ ಕಾಫಿ ಉತ್ತಮ ಫಸಲು ಬರಲು ಮಳೆ ಸಹಕಾರಿಯಾಗಿದೆ ಎಂದು ಕಾಫಿ ಬೆಳೆಗಾರರು ಅಭಿಪ್ರಾಯ ಪಟ್ಟಿದ್ದಾರೆ.
ನಾಪೋಕ್ಲು, ಸುಂಟಿಕೊಪ್ಪ, ಮರಗೋಡು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಮಾರ್ಚ್ನಲ್ಲಿ ತಿಂಗಳಲ್ಲಿ ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ನಾಪೋಕ್ಲು ಸುತ್ತಮುತ್ತ ಅರ್ಧ ಇಂಚು ಮಳೆಯಾಗಿದ್ದು. ಜಿಲ್ಲೆಯಲ್ಲಿ ಮಾರ್ಚ್ 18 ರವಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ ಬಿಸಿಲಿನಿಂದ ಹೈರಾಣಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ.. ನ್ಯಾಯಾಂಗ ಬಂಧನಕ್ಕೆ ಟಿಟಿಇ..!