ಕಾಂಗ್ರೆಸ್ನವರು ರಾಹುಲ್ ಗಾಂಧಿ ಕರ್ಕೊಂಡು ಬಂದ್ರೆ, ನಾವು ಮೋದಿಯನ್ನು ಕರೆಸುತ್ತೇವೆ: ವರ್ತೂರು ಪ್ರಕಾಶ್
🎬 Watch Now: Feature Video
ಕೋಲಾರ: ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಬೇಕೆಂಬುದು ನನಗೆ ಬಹಳ ಆಸೆ ಇದೆ, ಅವರು ಬಂದರೆ ಈ ವಿಧಾನಸಭಾ ಕ್ಷೇತ್ರದಲ್ಲಿ ರಂಗೇರಲಿದೆ ಎಂದು ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ ಹೇಳಿದ್ದಾರೆ. ಬುಧವಾರ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೈಕಮಾಂಡ್ ಬಳಿ ಎರಡು ಕಡೆ ನಿಲ್ಲುತ್ತೇನೆಂದು ಹೇಳಿದ್ದಾರೆ. ಅವರು ಕೋಲಾರಕ್ಕೆ ಬಂದರೆ ಕ್ಷೇತ್ರ ರಂಗೇರುತ್ತದೆ. ಇಲ್ಲವಾದರೆ ಕೋಲಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಪ್ಪೆ ಆಗಲಿವೆ. ಇಲ್ಲಿ ಯಾರೇ ಅಭ್ಯರ್ಥಿಗಳಾದರೂ ಚುನಾವಣೆಯನ್ನ ಬಹಳ ಸಂತೋಷದಿಂದ ನಡೆಸುತ್ತೇನೆ ಎಂದರು.
ಇನ್ನು ಏ.5. ರಾಹುಲ್ ಗಾಂಧಿ ಕೋಲಾರಕ್ಕೆ ಬರುತ್ತಿರುವುದರ ಬಗ್ಗೆ ಪ್ರತಿಕ್ರಯಿಸಿದ ಅವರು, ಕಾಂಗ್ರೆಸ್ ನವರು ರಾಹುಲ್ ಗಾಂಧಿ ಅವರನ್ನ ಕರೆಸಿದರೆ, ನಾವು ಪ್ರಪಂಚ ಮೆಚ್ಚಿದ ಜನ ನಾಯಕ ನರೇಂದ್ರ ಮೋದಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡುತ್ತೇವೆ. ರಾಹುಲ್ ಗಾಂಧಿ ಅವರಿಗೆ ಯಾವುದೇ ಇಮೇಜ್ ಇಲ್ಲ, ಅವರು ಬಂದು ಹೋದರೆ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸೋಲುತ್ತಾರೆ. ಅವರು ಬರುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವರ್ತೂರು ಹೇಳಿದರು.
ಕೋಲಾರಕ್ಕೆ ಸಿದ್ದರಾಮಯ್ಯ, ಖರ್ಗೆ, ಡಿ.ಕೆ. ಶಿವಕುಮಾರ್ ಅವರು ಬಂದಾಗ ಜನ ಸೇರಿಸಲು ಇವರಿಂದ ಸಾಧ್ಯವಾಗಲಿಲ್ಲ. ಇನ್ನು ರಾಹುಲ್ ಗಾಂಧಿ ಬಂದಾಗ ಜನ ಸೇರಿಸುತ್ತಾರಾ ಎಂದು ವರ್ತೂರು ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನ ಅನರ್ಹತೆ ಕುರಿತು ಮಾತನಾಡಿದ ಪ್ರತಿಕ್ರಿಯಿಸಿದ ವರ್ತೂರು ಪ್ರಕಾಶ್, ಮಾಡಿದ್ದುಣ್ಣೋ ಮಹಾರಾಯ ಅನ್ನೋ ರೀತಿ ಹಿಂದುಳಿದ ಸಮಾಜದ ಬಗ್ಗೆ ಕೀಳಾಗಿ ಮಾತನಾಡಿದಾಗ ಕೋರ್ಟ್ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಆ ತೀರ್ಮಾನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ರಾಹುಲ್ ಗಾಂಧಿ ಕೋಲಾರಕ್ಕೆ ಬರುತ್ತಿರುವುದರಿಂದ ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧಿಸುವೆ: ಸಿದ್ದರಾಮಯ್ಯ