ಕಾಶಿಯಲ್ಲಿ ದೇವ ದೀಪಾವಳಿ ಸಂಭ್ರಮ : 12 ಲಕ್ಷ ದೀಪಗಳಿಂದ ಬೆಳಗಿದ ಘಾಟ್‌ - ಸಿಎಂ ಯೋಗಿ ಆದಿತ್ಯನಾಥ್

🎬 Watch Now: Feature Video

thumbnail

By ETV Bharat Karnataka Team

Published : Nov 27, 2023, 11:03 PM IST

ವಾರಾಣಸಿ : ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ, ನೀವು ಇಂದು ಸ್ವರ್ಗ ಕಾಣಬೇಕಾದರೆ ಧಾರ್ಮಿಕ ನಗರ ಕಾಶಿಗೆ ಬರಬೇಕು. ಇಲ್ಲಿ ದೇವ್ ದೀಪಾವಳಿಯ ಶುಭ ಸಂದರ್ಭದಲ್ಲಿ ಕಾಶಿಯ ಅರ್ಧಚಂದ್ರಾಕಾರದ ಘಾಟ್‌ಗಳಲ್ಲಿ ಗಂಗಾ ಮಾತೆಗೆ ದೀಪಗಳ ಮಾಲೆಯ ಧರಿಸಿ ಅಲಂಕರಿಸುವ ಮೂಲಕ ಅದ್ಭುತವಾದ ಛತ್ ಆಚರಿಸಲಾಗುತ್ತದೆ. ಈ ಅಲೌಕಿಕ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮತ್ತು ವಿದೇಶಿ ಅತಿಥಿಗಳು ಬರುತ್ತಾರೆ. ಈ ಭವ್ಯ ನೋಟವನ್ನು ಇಂದು ಕಾಣಬಹುದು.

ದೇವ್ ದೀಪಾವಳಿಯಂದು 12 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಅಯೋಧ್ಯೆಯ ದೀಪಾವಳಿಯ ನಂತರ ಇಂದು ಕಾಶಿಯ ದೇವ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭಗವಂತನು ದೀಪಾವಳಿಯನ್ನು ಆಚರಿಸಲು ಸ್ವರ್ಗದಿಂದ ಕಾಶಿಯ ಘಾಟ್‌ಗಳಿಗೆ ಬರುತ್ತಾನೆ ಎಂದು ಹೇಳಲಾಗುತ್ತದೆ. ದೇವ್ ದೀಪಾವಳಿಯನ್ನು ಅದ್ಧೂರಿಯಾಗಿ ಮಾಡಲು ಯೋಗಿ ಸರ್ಕಾರವು 12 ಲಕ್ಷ ದೀಪಗಳಿಂದ ಘಾಟ್‌ಗಳನ್ನು ಬೆಳಗಿಸಿದೆ ಇವುಗಳಲ್ಲಿ ಒಂದು ಲಕ್ಷ ದೀಪಗಳನ್ನು ಗೋವಿನ ಸಗಣಿಯಿಂದ ತಯಾರಿಸಲಾಗುತ್ತದೆ.

ಈ ಉತ್ಸವದ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.  ಈ ವಿಶೇಷ ಉತ್ಸವಕ್ಕೆ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿತ್ತು. ಗಂಗಾ ಘಾಟ್‌ಗಳಲ್ಲಿ ಸ್ವಚ್ಛತೆಯ ಜೊತೆಗೆ ನಗರ ಮತ್ತು ಘಾಟ್‌ಗಳನ್ನು ತ್ರಿವರ್ಣ ಸುರುಳಿಯಾಕಾರದ ದೀಪಗಳಿಂದ ಅಲಂಕರಿಸಲಾಗಿತ್ತು. ಇಂದು ದೇವ್ ದೀಪಾವಳಿಯಂದು 8 ರಿಂದ 9 ಲಕ್ಷ ಪ್ರವಾಸಿಗರು ಕಾಶಿಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಇಲ್ಲಿ ಘಾಟ್‌ಗಳು ಹಾಗೂ ನಗರದ ಭದ್ರತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: ಅಮೃತಸರದ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್​ನಲ್ಲಿ 'ಬಂದಿ ಚೋರ್​ ದಿವಸ್'​ ಸಂಭ್ರಮ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.