ನನಗೆ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ: ​ಅಮೆರಿಕ ಸಂಸದ ಕನ್ನಡಿಗ ಶ್ರೀ ಥಾನೇದಾರ್ ಸಂತಸ.. ಯಾರೀ ಶ್ರೀ - ಪಿಎಂ ನರೇಂದ್ರ ಮೋದಿ ಕುರಿತು ಮೆಚ್ಚುಗೆ

🎬 Watch Now: Feature Video

thumbnail

By

Published : Jun 24, 2023, 6:52 AM IST

Updated : Jun 24, 2023, 7:17 AM IST

ವಾಷಿಂಗ್ಟನ್​​​ ಡಿಸಿ(ಅಮೆರಿಕ) : ಪ್ರಧಾನಿ ಮೋದಿಯವರು ಭಾರತೀಯ ವಲಸಿಗರನ್ನುದ್ದೇಶಿಸಿ ಮಾಡಿದ ಭಾಷಣದ ನಂತರ ಅಮೆರಿಕ​ ಸಂಸದ ಶ್ರೀ ಥಾನೇದಾರ್, ಪಿಎಂ ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. " ನಾನು ಮೋದಿಯವರ ಮಾತುಗಳನ್ನು ಕೇಳಿ ತುಂಬಾ ರೋಮಾಂಚನಗೊಂಡೆ. ಬೇರೆ ಯಾವುದೇ ಪ್ರಧಾನಿಯಲ್ಲೂ ನಾನು ಈ ರೀತಿಯ ಉತ್ಸಾಹವನ್ನು ನೋಡಿಲ್ಲ. ನನಗೆ ಪ್ರಧಾನಿ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ. ಅವರು ಅಗಾಧವಾಗಿ ಜನಪ್ರಿಯರಾಗಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಸಂಬಂಧವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇನೆ" ಎಂದರು.  

ಮಿಚಿಗನ್​​​​​​​​​ ಸಂಸದರಾಗಿರುವ ಥಾನೇದಾರ್​​, ಬರಹಗಾರ, ಉದ್ಯಮಿ ಹಾಗೂ ರಾಜಕಾರಿಣಿ, ಮೂಲತಃ ಬೆಳಗಾವಿಯವರಾದ ಥಾನೇದಾರ್​ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಮಿಚಿಗನ್​ ಸಂಸದರಾಗಿರುವ ಥಾನೇದಾರ್, ಅನಿವಾಸಿ ಭಾರತೀಯರ ಸಭೆಯಲ್ಲಿ ಭಾಗವಹಿಸಿ, ತಮ್ಮ ಸಂತಸ ಹಂಚಿಕೊಂಡರು.​

ಇನ್ನು ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಭಾರತೀಯ ಅನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪಾಲುದಾರಿಕೆಯು 21 ನೇ ಶತಮಾನದಲ್ಲಿ ಜಗತ್ತನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ಈ ಪಾಲುದಾರಿಕೆಯಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರ ವಹಿಸುತ್ತೀರಿ. ನಿಮ್ಮೆಲ್ಲರನ್ನು ಭೇಟಿಯಾಗಿರುವುದು ಊಟದ ನಂತರ ಸಿಹಿ ಖಾದ್ಯ ಸೇವಿಸಿದಷ್ಟು ಖುಷಿಯಾಯಿತು" ಎಂದರು.  

ಶ್ರೀ ಥಾನೇದಾರ್ ಯಾರು?: 1955 ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆ  ಚಿಕೋಡಿಯಲ್ಲಿ ಜನಿಸಿದ ಶ್ರೀ ಥಾನೇದಾರ್ ಅವರು ಮಿಚಿಗನ್‌ನ 13 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ಸಂಸದರಾಗಿದ್ದಾರೆ.  ಇದು ಡೆಟ್ರಾಯಿಟ್ ಒಂದು ನಗರವಾಗಿದೆ. ಗ್ರಾಸ್ ಪಾಯಿಂಟ್ ಮತ್ತು ಡೌನ್‌ರಿವರ್ ಸೇರಿದಂತೆ ವೇಯ್ನ್ ಕೌಂಟಿಯ ಹೆಚ್ಚಿನ ಭಾಗವನ್ನು ಒಳಗೊಂಡ ಪ್ರದೇಶವಾಗಿದೆ.

ಈ ಹಿಂದೆ, ಅವರು ಮಿಚಿಗನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.  ಥಾನೇದಾರ್ ಅವರು 1977 ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಭಾರತದಿಂದ 1979 ರಲ್ಲಿ ಅಮೆರಿಕಕ್ಕೆ ವಲಸೆ ಬಂದರು. ನಂತರ ಅವರು ಫಾಂಟ್‌ಬೋನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಮತ್ತು 1982 ರಲ್ಲಿ ಅಕ್ರಾನ್ ವಿಶ್ವವಿದ್ಯಾಲಯದಿಂದ ಪಾಲಿಮರ್ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದುಕೊಂಡರು.  ಥಾನೇದಾರ್  ಅವರು1988 ರಲ್ಲಿ ಅಮೆರಿಕದ ನಾಗರಿಕತ್ವ ಪಡೆದುಕೊಂಡು, ಈಗ ಅಮೆರಿಕನ್​​ರಾಗಿದ್ದಾರೆ.  

2017 ರಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿದರು.  ಮಿಚಿಗನ್ ಗವರ್ನರ್​ ಸ್ಥಾನಕ್ಕೆ ಸ್ಪರ್ಧಿಸಿದರು. ಆದರೆ ಅವರು ಅಲ್ಲಿ ಸೋಲು ಅನುಭವಿಸಿದರು.  ನಂತರ 2020 ರಲ್ಲಿ ಅವರು ಮಿಚಿಗನ್ ರಾಜ್ಯ ಸಂಸದರಾಗಿ ಆಯ್ಕೆ ಆದರು.  US ಗ್ರೀನ್ ಕಾರ್ಡ್‌ಗಳಿಗಾಗಿ ದೇಶ - ಆಧಾರಿತ ಕೋಟಾವನ್ನು ತೆಗೆದುಹಾಕುವ ಮತ್ತು H-1B ವೀಸಾ ಪ್ರೋಗ್ರಾಂಗೆ ಸುಧಾರಣೆಗಳಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಥಾನೇದಾರ್​ ಒಬ್ಬರು. ಅವರು ಯಶಸ್ವಿ ಉದ್ಯಮಿಯೂ ಹೌದು. 
ಇದನ್ನೂ ಓದಿ : PM Modi US Visit : ಪ್ರೊ. ನಾಸಿಮ್ ನಿಕೋಲಸ್ ತಾಲೇಬ್, ಲೇಖಕ ರಾಬರ್ಟ್ ಥರ್ಮನ್​ರೊಂದಿಗೆ ಮೋದಿ ಚರ್ಚೆ

Last Updated : Jun 24, 2023, 7:17 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.